Monday, April 12, 2021

ನಗಿಸುವ ಕಮಲಶಿಲೆ ಮಹಾಬಲ ದೇವಾಡಿಗ

♦ ದಿವ್ಯಾ ಶ್ರೀಧರ್ ರಾವ್
response@134.209.153.225
newsics.com@gmail.com
 
‘ಯಕ್ಷಚೌಕಿ’ newsics.com ನ ಹೊಸ ಅಂಕಣ. ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರವನ್ನೊಳಗೊಂಡ ನಾಲ್ಕು ಕಲೆಗಳ ಔಚಿತ್ಯಪೂರ್ಣ ಸಾಮರಸ್ಯವೇ ಯಕ್ಷಗಾನ. ಇದು ನಮ್ಮ ಸಂಸ್ಕೃತಿಯ ಪ್ರತೀಕ. ಇಂತಹ ಯಕ್ಷಗಾನ ಕರ್ನಾಟಕದ ಕರಾವಳಿಗೆ ಸೀಮಿತವಾಗಿಲ್ಲ. ಸೀಮೋಲ್ಲಂಘನವಾಗಿದೆ. ವಿಶ್ವವ್ಯಾಪಿಯಾಗಿದೆ. ಈ ಯಕ್ಷಲೋಕದಲ್ಲಿ ಪ್ರಸಿದ್ಧರ ಜತೆ ಎಲೆಮರೆಕಾಯಿಯಂತಿರುವ ಕಲಾವಿದರನ್ನೂ ಹುಡುಕುವ ಪ್ರಯತ್ನವೇ ಪ್ರತಿ ವಾರ ಪ್ರಕಟವಾಗುವ ಈ ಅಂಕಣ. ಎಂದಿನಂತೆ ನಿಮ್ಮ ಸಹಕಾರವಿರಲಿ.

===

‘ಸ ದ್ದಿಲ್ಲದೆ ಕಷ್ಟಪಟ್ಟರೆ ಯಶಸ್ಸು ಸದ್ದು ಮಾಡುವಂತಾಗುತ್ತದೆ’ ಎಂಬ ಮಾತಿನಂತೆ ಯಕ್ಷಗುರು ಕಮಲಶಿಲೆಯ ಮಹಾಬಲ ದೇವಾಡಿಗರ ಸದ್ದಿಲ್ಲದ ಪರಿಶ್ರಮ ಅವರನ್ನಿಂದು ಎತ್ತರಕ್ಕೇರಿಸಿದೆ.
ಒಬ್ಬ ಕಲಾವಿದನಾಗಿ ಪ್ರೇಕ್ಷಕರನ್ನು ಅಳಿಸಿದಷ್ಟು ಸುಲಭವಾಗಿ ನಗಿಸುವುದು ಕಷ್ಟವಂತೆ. ಆದರೆ ಮಹಾಬಲ ದೇವಾಡಿಗರು ಪ್ರೇಕ್ಷಕರನ್ನು ನಗಿಸುವ ಮೂಲಕವೇ ಮನೆಮಾತಾದವರು.
ಹುಟ್ಟೂರಿನ ಮೇಳವಾದ ಕಮಲಶಿಲೆ ಮೇಳದಲ್ಲಿ ತನ್ನ 15ನೇ ವಯಸ್ಸಿಗೆ ವಿದ್ಯೆ ನಿರಾಕರಿಸಿ ಹೆಜ್ಜೆ ಕಟ್ಟಿದ ದೇವಾಡಿಗರು ಸತತವಾಗಿ 48 ವರ್ಷ ಬಯಲಾಟದ ದಿಗ್ಗಜ ಮೇಳಗಳಲ್ಲಿ ಸೈ ಎನ್ನಿಸಿಕೊಂಡು ಪ್ರಸಕ್ತ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸುತ್ತ ಕಲಾರಸಿಕರನ್ನು ನಗಿಸುತ್ತಿದ್ದಾರೆ.
ಸುತ್ತಲಿರುವ ಹತ್ತಾರು ಹಳ್ಳಿಗಳಿಗೆ ಭೇಟಿ ಕೊಟ್ಟು, ಅಲ್ಲಿನ ಮಕ್ಕಳು ಹಾಗೂ ಯುವ ಪೀಳಿಗೆಯವರೆದೆಯಲ್ಲಿ ಯಕ್ಷಗಾನದ ಕಿಚ್ಚನ್ನು ಹತ್ತಿಸಿ, ಯಶಸ್ಸಿನ ಬೆನ್ನೇರುವಂತೆ ಮಾಡಿ ಅದೆಷ್ಟೋ ಯಕ್ಷಕಲಾವಿದರನ್ನು ಹುಟ್ಟುಹಾಕಿದ ಕೀರ್ತಿಯ ಜತೆ ಜತೆಗೆ ಯಕ್ಷರಂಗಕ್ಕೆ ಅತಿ ದೊಡ್ಡ ಕೊಡುಗೆ ಕೊಟ್ಟ ಹಿರಿಮೆ ಮಹಾಬಲ ದೇವಾಡಿಗರದು.
ರಂಗದ ಹಿಂದಿನ ಅಳಲನ್ನು ರಂಗದಲ್ಲಿ ತೋರಿಸಿಕೊಳ್ಳಲಾಗದ ಹಾಸ್ಯಪಾತ್ರಧಾರಿಯಾಗಿ, ಒಬ್ಬ ಸಮರ್ಥ ಗುರುವಾಗಿ, ಕೇವಲ ಹೆಂಡತಿ – ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ, ಕಲೆಯ ಉದ್ದಾರಕ್ಕಾಗಿ ಶ್ರಮಿಸಿದ ಹಿರಿಯ ಕಲಾವಿದ ಮಹಾಬಲ ದೇವಾಡಿಗರು. ಸಹೃದಯಿ, ನಿಸ್ಪ್ರಹ ಕಲಾವಿದ ದೇವಾಡಿಗರಿಗೆ (9902296077) ನಿಮ್ಮ ಶುಭ ಹಾರೈಕೆಯೂ ಇರಲಿ. ಇವರ ಸೇವೆ ಇನ್ನಷ್ಟು ಅನುಪಮವಾಗಲಿ.

 ♦  ಯಕ್ಷಗಾನದ 47 ವರ್ಷಗಳ ತಿರುಗಾಟ ನನಗೆ ತೃಪ್ತಿ ಕೊಟ್ಟಿದೆ. ಮೊದಲು ಯಕ್ಷಗಾನದ ಬಗ್ಗೆ ಜನರಿಗೆ ಕೀಳರಿಮೆ ಇತ್ತು. ಆದರೆ ಈಗ ಹಾಗಿಲ್ಲ. ನನ್ನ ಮಕ್ಕಳಿಗೆ ಯಕ್ಷಗಾನ ಕಲಿಸದ ಬಗ್ಗೆ ನನಗೆ ನೋವಿದೆ.
ಮಹಾಬಲ ದೇವಾಡಿಗ ಕಮಲಶಿಲೆ
ಮಹಾಬಲ ದೇವಾಡಿಗ ಕಮಲಶಿಲೆ

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!