Wednesday, October 5, 2022

ಯಕ್ಷರಂಗದ ಭೀಷ್ಮ

Follow Us

ಅಸ್ಖಲಿತ ವಾಗ್ಮಿ, ಯಕ್ಷರಂಗದ ಭೀಷ್ಮ, ಸಾಮಗರು, ಅಕ್ಷರ ಭಂಡಾರ ಎಂಬೆಲ್ಲ ಹೆಸರುಗಳಿಂದ ಅವರನ್ನು ಪ್ರೀತಿಯಿಂದ ಕರೆದು ಪ್ರೀತಿಸುತ್ತಿದ್ದ ಸಾವಿರಾರು ಅಭಿಮಾನಿಗಳನ್ನು ಅನಾಥರನ್ನಾಗಿಸಿದ್ದಾರೆ ವಾಸುದೇವ ಸಾಮಗರು. ತಾಳಮದ್ದಳೆ ಕ್ಷೇತ್ರದ ಸೂರ್ಯ ಅಸ್ತಂಗತ.

    ನುಡಿನಮನ    

♦ ದಿವ್ಯಾ ಶ್ರೀಧರ್ ರಾವ್
newsics.com@gmail.com

 ಸು ಮಾರು 1971ರಲ್ಲಿ ಯಕ್ಷರಂಗ ಪ್ರವೇಶಿಸಿದ ವಾಸುದೇವ ಸಾಮಗರು ತಮ್ಮ ಬತ್ತಳಿಕೆಯಲ್ಲಿದ್ದ ಅಭೂತಪೂರ್ವ ಮಾತುಗಳಿಂದ ಕೇವಲ ಮೂರು ವರ್ಷಗಳಲ್ಲಿ ಪ್ರಸಿದ್ಧರಾದವರು. 1973 ರಲ್ಲಿ ಮಾಡಿದ ಪ್ರದೀಪ ಎಂಬ ಪಾತ್ರ ಅವರಿಗೆ ಹೆಸರು ತಂದುಕೊಟ್ಟ ಕಾರಣದಿಂದ ತಮ್ಮ ಮಗನಿಗೆ ಪ್ರದೀಪ ಎಂದೇ ಹೆಸರಿಟ್ಟರು.
ಯಕ್ಷಗಾನವನ್ನು ಬರಿಯ ಕುಣಿತವೆಂದುಕೊಂಡ ಕಲಾವಿದರನ್ನು ಕಂಡು ಹಾಗೂ ಪೌರಾಣಿಕ ಜ್ಞಾನದ ಅಭಾವವನ್ನು ಕಂಡು ಬೇಸತ್ತ ಸಾಮಗರು, ನೀನಾಸಂ(ನೀಲಕಂಠೇಶ್ವರ ನಾಟ್ಯ ಸಂಘ)ನ ಸ್ಪೂರ್ತಿಯಿಂದ ‘ಸಂಯಮಂ’ ಮೂಲಕ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ ಕರ್ನಾಟಕದಾದ್ಯಂತ ತಾಳಮದ್ದಳೆಯನ್ನು ಪರಿಚಯಿಸಿದರು.
ಪೌರಾಣಿಕ ಪ್ರಸಂಗಗಳ ಸಮಗ್ರ ಪುಸ್ತಕ…
ಸಾಮಗ ಪರಂಪರೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಸಾಮಗರು ತಮ್ಮ ಮಗ ಪ್ರದೀಪ ಸಾಮಗರು ತನ್ನೆಲ್ಲ ಯೋಚನೆ ಹಾಗೂ ಯೋಜನೆಗಳನ್ನು ಅರ್ಥೈಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದರು. ಮಗನ ಮೂಲಕ ತಮ್ಮ ಕನಸುಗಳನ್ನು ನನಸಾಗಿಸುವ ಬಗ್ಗೆ ಅದೆಷ್ಟೋ ಬಾರಿ ಹೇಳಿಕೊಂಡಿದ್ದರು.
ಪೌರಾಣಿಕ ಪ್ರಸಂಗಗಳನ್ನು ಒಂದೆಡೆ ಸೇರಿಸಿ ಅದನ್ನು ಪುಸ್ತಕ ರೂಪದಲ್ಲಿ ತಂದು ಯಕ್ಷಕಲಾವಿದರಿಗೆ ಆ ಪುಸ್ತಕ ಅತೀ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದವರು. ಆ ಮೂಲಕ 80 ಪ್ರಸಂಗಗಳನ್ನು ರಂಗದ ಮಾರ್ಗ ಸೂಚನೆಗಳೊಂದಿಗೆ ತಲುಪಿಸಿದ್ದರು.
ಕರ್ನಾಟಕದುದ್ದಗಲಕ್ಕೂ ಹರಡಬೇಕಿದ್ದ ಈ ಕಲೆ, ಕರಾವಳಿ ಪ್ರದೇಶದಲ್ಲಿ ಮಾತ್ರ ಹೊರಳಾಡುವಂತಾಗಿದೆ ಎನ್ನುತ್ತಿದ್ದ ಸಾಮಗರ ಈ ಮಾತಿನ ನೋವಿನ ತೀವ್ರತೆ ನಮ್ಮನ್ನು ಸದಾ ಕಾಡುತ್ತಿರುತ್ತದೆ.
ಶೇಣಿಯವರಂತಹ ಹಿರಿಯ ಕಲಾವಿದರ ಜತೆ ಒಡನಾಡಿದ ವಾಸುದೇವ ಸಾಮಗರು, ಹಿರಿ-ಕಿರಿಯ ಕಲಾವಿದರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಹಾಸ್ಯ ಪ್ರವೃತ್ತಿಯವರಾದ ವಾಸುದೇವ ಸಾಮಗರು, ಯಾವಾಗಲೂ ನಗು ನಗುತ್ತಾ, ತಮಾಷೆ ಮಾಡುತ್ತಾ ತಮ್ಮ ಸರಳತೆಯನ್ನು ಮೆರೆಯುತ್ತಿದ್ದರು.
ವಾಸುದೇವ ಸಾಮಗರು ಸಾಮಾಜಿಕ ಪ್ರಸಂಗಗಳನ್ನು ವರ್ಷದ ಪ್ರಸಂಗವೆಂದೇ ಕರೆಯುತ್ತಿದ್ದರು. ಅಷ್ಟರಮಟ್ಟಿಗೆ ಪೌರಾಣಿಕ ಪ್ರಿಯರಾಗಿದ್ದ ಸಾಮಗರು, ಪ್ರಸಂಗಕರ್ತನ ಆಶಯವನ್ನು ಪ್ರತಿಪಾದಿಸುವುದನ್ನು ಅರ್ಥಧಾರಿಗಳು ಮೊದಲು ಕಲಿತಿರಬೇಕು. ಆಗ ಮಾತ್ರ ಉತ್ತಮ ಅರ್ಥಧಾರಿಯಾಗಲು ಸಾಧ್ಯ ಎನ್ನುತ್ತಿದ್ದರು. ಸಾಮಗರು ನಡೆದ ದಾರಿ ಕಲಾವಿದರಿಗೆ ದಾರಿದೀಪವಾಗಬೇಕಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು....

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...

ಭೀಕರ ಅಪಘಾತ- 10 ಮಂದಿ ಸಾವು, 7 ಮಂದಿಗೆ ಗಾಯ

newsics.com ವಡೋದರ: ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ವಡೋದರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ತ್ರಿಚಕ್ರ ವಾಹನವೊಂದಕ್ಕೆ ಕಂಟೈನರ್‌ ಟ್ರಕ್‌ ಡಿಕ್ಕಿ ಹೊಡೆದಿದೆ....
- Advertisement -
error: Content is protected !!