ಗುವಾಹತಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಪೌರತ್ವ ಮಸೂದೆ ಲೋಕಸಭೆಯಲ್ಲಿ ಅನುಮೋದನೆಗೊಂಡ ಬೆನ್ನಲ್ಲೇ ಈಶಾನ್ಯ ಭಾರತದ ಅಸ್ಸಾಮ್, ಅರುಣಾಚಲ, ಮೇಘಾಲಯ, ಮಿಜೋರಾಮ್ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.
ಪೌರತ್ವ ಮಸೂದೆಯಲ್ಲಿ ಒಳ ಪ್ರದೇಶ ಭೇಟಿಗೆ ಅವಕಾಶ (ಇನ್ನರ್ ಲೈನ್ ಪರ್ಮಿಟ್) ಕಲ್ಪಿಸುವ ಅಂಶವನ್ನು ಸೇರಿಸಿರುವುದನ್ನು ಈಶಾನ್ಯ ರಾಜ್ಯಗಳು ಆಕ್ಷೇಪಿಸುತ್ತಿವೆ. ಇದರಿಂದ ಈಶಾನ್ಯದ ಸೂಕ್ಷ್ಮ ಸಾಂಸ್ಕೃತಿಕ ಮತ್ತು ಪರಿಸರ ವಾತಾವರಣಕ್ಕೆ ಧಕ್ಕೆಯಾಗುತ್ತದೆ ಎಂಬುದು ಇಲ್ಲಿನವರ ಆತಂಕವಾಗಿದೆ.
ಪೌರತ್ವ ಮಸೂದೆಗೆ ಸಮ್ಮತಿ; ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶ
Follow Us