ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಲೋಕಸಭೆಯಲ್ಲಿ ಸುದೀರ್ಘ 12 ಗಂಟೆಗಳ ಚರ್ಚೆ ವೇಳೆ ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಅಮಿತ್ ಷಾ ಉತ್ತರಿಸಿದರು. 311 ಸಂಸದರು ಬಿಲ್ ಪರ ವೋಟ್ ಮಾಡಿದರು. ವಿರೋಧವಾಗಿ 80 ಮಂದಿ ಮತ ಹಾಕಿದರು.
ಮಸೂದೆ ಮಂಡಿಸಿ ತಮ್ಮದೇ ಶೈಲಿಯಲ್ಲಿ ಸಮರ್ಥಿಸಿಕೊಂಡ ಅಮಿತ್ ಷಾ ಕ್ರಮವನ್ನು ಮೋದಿ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಬಿಲ್ ಪಾಸ್ ಆಗಿದ್ದಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಗೃಹಸಚಿವ ಅಮಿತ್ ಷಾ ಅವರನ್ನು ಪ್ರಶಂಸಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಇನ್ನೊಂದು ಟ್ವೀಟ್ಬಿ ನಲ್ಲಿ ಬಿಲ್ ಬೆಂಬಲಿಸಿದ ಎಲ್ಲ ಸಂಸದರು, ಪಕ್ಷಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪೌರತ್ವ ಮಸೂದೆ ದೇಶದ ಪುರಾತನ ಏಕೀಕರಣ ನೀತಿಯನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಅಲ್ಪಸಂಖ್ಯಾತರು ಯಾವುದೇ ಭಯಪಡದೆ ಸುರಕ್ಷಿತವಾಗಿ ಇರಬಹುದು ಎಂದು ಅಮಿತ್ ಷಾ ಭರವಸೆ ನೀಡಿದ್ದರೂ ಅಮಿತ್ ಷಾ ವಿರುದ್ಧ ಅಮೆರಿಕ ದಿಗ್ಬಂಧನ ವಿಧಿಸಬೇಕು ಎಂದು ಮುಸ್ಲಿಂ ನಿಯೋಗ ಅಮೆರಿಕಕ್ಕೆ ಮನವಿ ಮಾಡಿದೆ.
ಪೌರತ್ವ ಮಸೂದೆ ಪಾಸ್; ಅಮಿತ್ ಷಾಗೆ ಮೋದಿ ಅಭಿನಂದನೆ
Follow Us