ಬೆಂಗಳೂರು: ವಯಸ್ಸಿಗೆ ಬಂದವರೆಲ್ಲಾ ಐಶ್ವರ್ಯ ರೈ ಬೇಕು ಎಂದು ಕೇಳುತ್ತಾರೆ .ಆದರೆ ಅವಳು ಇರುವುದು ಒಬ್ಬಳೇ ತಾನೇ?ಇಂತಹದೊಂದು ಹೇಳಿಕೆ ನೀಡುವ ಮೂಲಕ ಎಡವಟ್ಟಿಗೆ ಸಿಲುಕಿರುವುದು ಸಚಿವ ಕೆ.ಎಸ್.ಈಶ್ವರಪ್ಪ.
ವಿಧಾನಸೌಧದಲ್ಲಿ ರಾಜ್ಯದಲ್ಲಿ ಮತ್ತೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಮಾಡುವ ಸಾಧ್ಯತೆ ಇದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು , ಉಪ ಮುಖ್ಯಮಂತ್ರಿ ಆಗುವುದಕ್ಕೆ ರಾಜಕಾರಣದಲ್ಲಿ ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹೇಳಿ. ಎಲ್ಲರಿಗೂ ಆಸೆ ಇದ್ದೇ ಇರುತ್ತದೆ ಎನ್ನುವ ವೇಳೆ ಐಶ್ವರ್ಯ ರೈ ಪ್ರಸ್ತಾಪ ಮಾಡಿದ್ದಾರೆ.