newsics.com
ಶ್ರೀರಂಗಪಟ್ಟಣ: ಪಾಲಹಳ್ಳಿಯ ವಿನು ಎಂಬವರ ಹಳ್ಳಿಕಾರ್ ತಳಿಯ ಒಂಟಿ ಎತ್ತನ್ನು ಶುಕ್ರವಾರ (ಮೇ 26) ಬರೋಬ್ಬರಿ 10.25 ಲಕ್ಷ ರೂ. ದಾಖಲೆ ಬೆಲೆಗೆ ಚಿಕ್ಕಮಗಳೂರು ತಾಲ್ಲೂಕು ತೇಗೂರಿನ ಮಂಜಣ್ಣ ಎಂಬವವರು ಖರೀದಿಸಿದ್ದಾರೆ.
ಹಾಸನ, ಚಿಕ್ಕಮಗಳೂರು, ತರೀಕೆರೆ, ತೇಗೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಓಟದ ಸ್ಪರ್ಧೆಗಳಲ್ಲಿ ಎತ್ತು ಬಹುಮಾನಗಳನ್ನು ಪಡೆದಿತ್ತು. ಗಾಳಿ ವೇಗದಲ್ಲಿ ನುಗ್ಗುವ ಎತ್ತಿಗೆ ‘ಬ್ಯಾಂಡ್ ಅಣ್ಣಪ್ಪ’ ಎಂದು ವಿನು ಹೆಸರು ಇಟ್ಟಿದ್ದರು.
ಅವರು ಒಂದೂವರೆ ವರ್ಷದ ಹಿಂದೆ ‘ಗಗನ್’ ಎಂಬ ಹೆಸರಿನ ಮತ್ತೊಂದು ಎತ್ತನ್ನು 7.68 ಲಕ್ಷಕ್ಕೆ ಮಾರಿದ್ದರು. ಅದನ್ನೂ ತೇಗೂರಿನ ಮಂಜಣ್ಣ ಅವರೇ ಖರೀದಿಸಿದ್ದರು.
ಬಿಜೆಪಿ ತೊರೆದು ಬಂದ ಸವದಿ- ಶೆಟ್ಟರ್ ಗೆ ಕೈ ಕೊಟ್ಟ ಕಾಂಗ್ರೆಸ್: ಸಚಿವ ಸ್ಥಾನ ಮಿಸ್