ಮಾಸ್ಕೋ: ರಷ್ಯಾದ ತೊಮ್ಸ್ಕ್ ಪ್ರಾಂತ್ಯದ ಪ್ರಿಚುಲಿಮಿಸ್ಕಿ ಗ್ರಾಮದಲ್ಲಿ ಮರದಲ್ಲಿ ನಿರ್ಮಿಸಲಾದ ಒಂದು ಅಂತಸ್ಸಿನ ಕಟ್ಟಡಕ್ಕೆ ಬೆಂಕಿ ತಗುಲಿನ ಪರಿಣಾಮ ಕನಿಷ್ಟ 11 ಮಂದಿ ಮೃತಪಟ್ಟಿದ್ದಾರೆ ಎಂದು ತುರ್ತು ಸೇವೆಗಳ ಸಚಿವಾಲಯದ ಪ್ರಾಂತೀಯ ಇಲಾಖೆ ತಿಳಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 7.03ಕ್ಕೆ 11 ಮೃತದೇಹಗಳನ್ನು ಹೊರತೆಗೆಯಲಾಗಿದೆ. ದುರಂತದಲ್ಲಿ ಮೃತಪಟ್ಟವರು ವಿದೇಶೀಯರಾಗಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಇಬ್ಬರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಪ್ರಾದೇಶಿಕ ತುರ್ತು ಸೇವಾ ಇಲಾಖೆ ಮಾಹಿತಿ ನೀಡಿದೆ.
ರಷ್ಯಾ: ಮರದ ಕಟ್ಟಡಕ್ಕೆ ಬೆಂಕಿ, 11 ಸಾವು
Follow Us