ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಯಿಂದ ಅನುಮಾನಾಸ್ಪದವಾಗಿ ಹಣ ನಾಪತ್ತೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆಗೆ ಮುಂದಾಗಿದ್ದು, ಸುಶಾಂತ್ ಗೆಳತೀ ರಿಯಾ ಬಂಧನ ಸಾಧ್ಯತೆ ಹೆಚ್ಚಿದೆ.
ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಯಿಂದ ಸುಮಾರು 15 ಕೋಟಿ ರೂಪಾಯಿಯಷ್ಟು ಹಣದ ವರ್ಗಾವಣೆಯಾಗಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಸುಶಾಂತ್ ತಂದೆ ಬಿಹಾರ್ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣದ ಎಫ್’ಐಆರ್ ಪ್ರತಿ ನೀಡುವಂತೆ ಜಾರಿ ನಿರ್ದೇಶನಾಲಯ ಬಿಹಾರ ಪೊಲೀಸರನ್ನು ಕೋರಿದೆ.
15 ಕೋಟಿ ರೂಪಾಯಿ ಹಣ ವರ್ಗಾವಣೆ, ವ್ಯವಹಾರ ನಡೆದಿದ್ದು, ಇದನ್ನು ಹಣ ದುರುಪಯೋಗ ಪ್ರಕರಣದಡಿಯಲ್ಲಿ ತನಿಖೆ ನಡೆಸಬೇಕಾದ ಅಗತ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಸೂಕ್ತ ಸಾಕ್ಷ್ಯಾಧಾರಗಳು ದೊರೆತಲ್ಲಿ ಗೆಳತಿ ರಿಯಾ ಬಂಧನ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.
ಜಯಾ ಜೇಟ್ಲಿ ಸೇರಿ ಮೂವರಿಗೆ 4 ವರ್ಷ ಜೈಲು; ದೆಹಲಿ ವಿಶೇಷ ಕೋರ್ಟ್ ತೀರ್ಪು
ಸುಶಾಂತ್ ಗೆಳತಿ ರಿಯಾ ತನ್ನ ಮಗನಿಗೆ ಮೋಸ ಮಾಡಿದ್ದು, ಸಿಂಗ್ ಖಾತೆಯಿಂದ ಅಪಾರ ಹಣವನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಸುಶಾಂತ್ ತಂದೆ ರಿಯಾ ವಿರುದ್ಧ ಬಿಹಾರದಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪೂರ್ಣ ಪ್ರಮಾಣದ ವಿವರ ನೀಡುವಂತೆ ಜಾರಿ ನಿರ್ದೇಶನಾಲಯ ತಿಳಿಸಿದೆ ಎಂದು ವರದಿ ವಿವರಿಸಿದೆ.
ಹಣ ಲಪಟಾಯಿಸಿದ ಕೃತ್ಯದಲ್ಲಿ ರಿಯಾ ಚಕ್ರವರ್ತಿ ಸಹೋದರನೂ ಶಾಮೀಲಾಗಿರುವುದಾಗಿ ಸುಶಾಂತ್ ತಂದೆ ಆರೋಪಿಸಿದ್ದಾರೆ. ಕಳೆದ ತಿಂಗಳು ನಟ ಸುಶಾಂತ್ ಸಿಂಗ್ ಮುಂಬೈನ ಅಪಾರ್ಟ್ ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದರು.
ರಿಯಾ ಹಾಗೂ ಕುಟುಂಬಸ್ಥರ ವಿರುದ್ಧ ಸುಶಾಂತ್ ತಂದೆ ಕೆಕೆ ಸಿಂಗ್ ದಾಖಲಿಸಿರುವ ಎಫ್ ಐಆರ್ ವರದಿಯ ವಿವರ ಕೊಡುವಂತೆ ಇ.ಡಿ. ಅಧಿಕಾರಿಗಳು ಬಿಹಾರ ಪೊಲೀಸರಲ್ಲಿ ಕೇಳಿದ್ದಾರೆ. ಎಫ್ ಐಆರ್ ನಲ್ಲಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಹಾಗೂ ಕುಟುಂಬದ ಇತರ ಸದಸ್ಯರು ಸೇರಿ ಆರು ಮಂದಿಯ ಹೆಸರು ದಾಖಲಾಗಿದೆ.