ನವದೆಹಲಿ: ಸಧ್ಯದಲ್ಲೇ 2 ಸಾವಿರ ಮುಖ ಬೆಲೆಯ ನೋಟುಗಳ ಮುದ್ರಣ ಸ್ಥಗಿತವಾಗಲಿದೆ ಎಂದ ಮಾಧ್ಯಮಗಳ ಊಹಾಪೋಹಕ್ಕೆ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ತೆರೆ ಎಳೆದಿದ್ದು, 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.
ಶನಿವಾರÀ ಲೋಕಸಭೆಗೆ ಲಿಖಿತ ಉತ್ತರ ನೀಡಿದ ಸಚಿವ ಠಾಕೂರ್, ಲಾಕ್ ಡೌನ್ ಕಾರಣಕ್ಕೆ ತಾತ್ಕಾಲಿಕವಾಗಿ ನೋಟುಗಳ ಮುದ್ರಣ ನಿಲ್ಲಿಸುವಂತೆ ಆರ್‍ಬಿಐಗೆ ಸೂಚನೆ ನೀಡಲಾಗಿತ್ತು. ಲಾಕ್ ಡೌನ್ ತೆರವಿನ ಬಳಿಕ ಮುದ್ರಣ ಆರಂಭವಾಗಿದೆ ಎಂದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿ ಅನ್ವಯ ನೋಟುಗಳ ಮುದ್ರಣ ಪುನರಾರಂಭವಾಗಿದ್ದು, 2020 ರ ಮಾರ್ಚಅಂತ್ಯದ ವೇಳೆಗೆ ದೇಶದಲ್ಲಿ 2 ಸಾವಿರ ಮುಖಬೆಲೆಯ 27,398 ನೋಟುಗಳು ಚಲಾವಣೆಯಲ್ಲಿ ಇದೆ. 2019 ರ ಮಾರ್ಚ 31 ರ ವೇಳೆಗೆ ಈ ಸಂಖ್ಯೆ 32,910 ರಷ್ಟಿತ್ತು ಎಂದು ವಿವರಣೆ ನೀಡಿದ್ದಾರೆ.
2 ಸಾವಿರ ಮುಖಬೆಲೆಯ ನೋಟು ಮುದ್ರಣ ಸ್ಥಗಿತವಿಲ್ಲ
Follow Us