newsics.com
ಕಾಂಬೋಡಿಯಾ: ಸಾಕಿದ ರೈತನನ್ನೇ ಬರೋಬ್ಬರಿ 40 ಮೊಸಳೆಗಳು ಸೇರಿ ಹರಿದು ತಿಂದು, ಕೊಂದಿರುವ ಘಟನೆ ಇಂದು ( ಮೇ 26) ಕಾಂಬೋಡಿಯಾದಲ್ಲಿ ನಡೆದಿದೆ.
ಕಾಂಬೋಡಿಯಾದ 72ರ ಹರೆಯದ ಲುವಾನ್ ನಾಮ್ ಎಂಬವರು ಸ್ಥಳೀಯ ಮೊಸಳೆ ರೈತರ ಸಂಘದ ಅಧ್ಯಕ್ಷರಾಗಿದ್ದರು. ಅವರೇ ಸಾಕಿದ 40 ಮೊಸಳೆಗಳ ಬಾಯಲ್ಲಿ ಸಿಲುಕಿದ ಲುವಾನ್ ಅಸುನೀಗಿದ್ದಾರೆ.
ಕಾಂಬೋಡಿಯಾದ ಸೀಮ್ ರೀಪ್ ಪಟ್ಟಣದಲ್ಲಿ ಮೊಸಳೆಗಳ ಫಾರ್ಮ್ ನಡೆಸುತ್ತಿದ್ದ ಇವರು ಇಂದು ಸ್ಟಿಕ್ ಬಳಸಿ ಮೊಸಳೆಯೊಂದನ್ನು ಮೊಟ್ಟೆ ಇಟ್ಟಿದ್ದ ಪಂಜರದಿಂದ ದೂರ ಸರಿಸಲು ಪ್ರಯತ್ನಿಸುತ್ತಿದ್ದರು.
ಈ ವೇಳೆ ಮೊಸಳೆ ಸ್ಟಿಕ್ ಅನ್ನು ಕಚ್ಚಿ ಎಳೆದಿದ್ದು ಲುವಾನ್ ನಾಮ್ ಮೊಸಳೆಗಳ ಗೂಡಿನೊಳಗೆ ಬಿದ್ದಿದ್ದಾರೆ. ನಂತರ ಇತರ ಮೊಸಳೆಗಳೂ ಅವರ ಮೇಲೆ ದಾಳಿ ನಡೆಸಿ ಅವರು ಸಾಯುವವರೆಗೂ ಕಚ್ಚಿ ಕಚ್ಚಿ ತಿಂದಿವೆ.
ಲುವಾನ್ ನಾಮ್ ಅವರ ಒಂದು ಕೈಯನ್ನು ಪೂರ್ತಿಯಾಗಿ ಮೊಸಳೆಗಳು ಕಚ್ಚಿ ನುಂಗಿವೆ. ಈ ಘಟನೆಯನ್ನು ಸೀಮ್ ರೀಪ್ ಪಟ್ಟಣದ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಬೆತ್ತಲೆ ವಿಡಿಯೋ ಮಾಡಿದ ಯುವತಿ ಬ್ಲ್ಯಾಕ್‌ಮೇಲ್: 23 ಲಕ್ಷ ಕಳೆದುಕೊಂಡ ಬೆಂಗಳೂರು ಉದ್ಯೋಗಿ
ಕುನೋ ಪಾರ್ಕ್‌ನಲ್ಲಿ ಮತ್ತೆರಡು ಚೀತಾ ಮರಿ ಸಾವು, ಇನ್ನೊಂದರ ಸ್ಥಿತಿ ಗಂಭೀರ