Saturday, June 10, 2023

ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ 7 ವಿರೋಧ ಪಕ್ಷಗಳು ಭಾಗಿ

Follow Us

newsics.com

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೊಸ ಸಂಸತ್ ಭವನ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದಲ್ಲಿ ಏಳು ಪ್ರತಿಪಕ್ಷಗಳು ಭಾಗವಹಿಸಿದರೆ, 19 ಪ್ರತಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ.

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಏಳು ಪ್ರತಿಪಕ್ಷಗಳು ಸೇರಿದಂತೆ 25 ರಾಜಕೀಯ ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಭಾರತೀಯ ಜನತಾ ಪಾರ್ಟಿ ಸೇರಿದಂತೆ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ದ 18 ಮಿತ್ರ ಪಕ್ಷಗಳ ಹೊರತಾಗಿ, ಏಳು ಎನ್ ಡಿಎಯೇತರ ಪಕ್ಷಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ.

ಬಹುಜನ ಸಮಾಜ ಪಕ್ಷ, ಶಿರೋಮಣಿ ಅಕಾಲಿದಳ, ಜನತಾ ದಳ(ಜಾತ್ಯತೀತ), ಲೋಕ ಜನಶಕ್ತಿ ಪಕ್ಷ- ರಾಮ್ ವಿಲಾಸ್, ಯುವಜನ ಶ್ರಮಿಕ ರೈತ ಕಾಂಗ್ರೆಸ್, ಬಿಜು ಜನತಾ ದಳ ಮತ್ತು ತೆಲುಗು ದೇಶಂ ಪಕ್ಷ ಸೇರಿದಂತೆ ಏಳು ಎನ್‌ಡಿಎಯೇತರ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ.

ನೂತನ ಸಂಸತ್ ಭವನ ದೇಶದ ಆಸ್ತಿ ಮತ್ತು ತೆರಿಗೆದಾರರ ಹಣದಿಂದ ಅದನ್ನು ನಿರ್ಮಿಸಿದ ಕಾರಣ ತಾವು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗುರುವಾರ ಹೇಳಿದ್ದಾರೆ.

ಕಾಂಗ್ರೆಸ್, ಎಡಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ಹತ್ತೊಂಬತ್ತು ಪ್ರತಿಪಕ್ಷಗಳು ಒಟ್ಟಾಗಿ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಘೋಷಿಸಿವೆ.

ಮೇ 27ರಂದು‌‌ ಸಂಪುಟ ವಿಸ್ತರಣೆ: ಸಂಭಾವ್ಯ ಸಚಿವರ ಪಟ್ಟಿ ವೈರಲ್

ಮತ್ತಷ್ಟು ಸುದ್ದಿಗಳು

vertical

Latest News

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್

Newsics.com ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ...

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ...

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...
- Advertisement -
error: Content is protected !!