Monday, October 2, 2023

LPG ಸಿಲಿಂಡರ್ ದರದಲ್ಲಿ 83.50 ರೂ. ಇಳಿಕೆ

Follow Us

newsics.com

ನವದೆಹಲಿ: 19 ಕೆಜಿ LPG ಸಿಲಿಂಡರ್ ಬೆಲೆ 83.50 ರೂ.ಗೆ ಇಳಿಕೆಯಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ. ನಷ್ಟು ಇಳಿಕೆಯಾಗಿದೆ. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳಿಗೆ ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ.

ಅಂದರೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ. ಏತನ್ಮಧ್ಯೆ, ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಸಹ ಸಿಲಿಂಡರ್ ಬೆಲೆ 172 ರೂ.ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 85 ರೂ.ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗೆ ಸಿಲಿಂಡರ್ ಬೆಲೆ 250 ರೂ.ನಷ್ಟು ಕಡಿಮೆಯಾಗಿದೆ ಎನ್ನಬಹುದು.

ಈಗಾಗಲೇ ವಾಣಿಜ್ಯ ಸಿಲಿಂಡರ್ ಬೆಲೆ 1,856.50 ರೂ. ನಷ್ಟಿತ್ತು ಅದು 1,773 ರೂ.ಗೆ ಇಳಿಕೆಯಾಗಿದೆ. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.

ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ

ರಾಜಸ್ಥಾನದಲ್ಲಿ 100 ಯೂನಿಟ್ ವಿದ್ಯುತ್ ಫ್ರೀ: ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ

ಮತ್ತಷ್ಟು ಸುದ್ದಿಗಳು

vertical

Latest News

ಮೊಸಳೆಯೊಂದಿಗೆ ಬೇಸ್ ಬಾಲ್ ಮ್ಯಾಚ್ ನೋಡಲು ಬಂದ ಪ್ರಾಣಿ ಪ್ರೇಮಿ!

newsics.com ಅಮೆರಿಕ: ಮನೆಯಲ್ಲಿ ಸಾಕಿದ್ದ ಮೊಸಳೆಯೊಂದಿಗೆ ಬೇಸ್‌ಬಾಲ್ ಮ್ಯಾಚ್‌ ನೋಡಲು ಸ್ಟೇಡಿಯಂ ಬಂದ ಪ್ರಾಣಿ ಪ್ರೇಮಿಯೊಬ್ಬನನ್ನು ಕಂಡು ಭದ್ರತಾ ಸಿಬ್ಬಂದಿ ದಂಗಾಗಿ ಪ್ರವೇಶ ನಿರಾಕರಿಸಿರುವ ಪ್ರಸಂಗ ಅಮೆರಿಕಾದ...

ಜಿಪಿಎಸ್ ಮ್ಯಾಪ್ ಎಡವಟ್ಟು: ಕಾರು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರ ಸಾವು

newsics.com ತಿರುವನಂತಪುರಂ: ಜಿಪಿಎಸ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋದ ಕಾರೊಂದು ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ತಡರಾತ್ರಿ ಭಾರಿ ಮಳೆಯ ಕಾರಣ ಅವಘಡ ಸಂಭವಿಸಿದೆ. ಮೃತರನ್ನು ಡಾ.ಅದ್ವೈತ್ (29)...

ವರದಿಗಾರ್ತಿ ಮೇಲೆ ರೇಗಿದ ಅಣ್ಣಾಮಲೈ: ಖಂಡನೆ

newsics.com ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಹಿಳಾ ವರದಿಗಾರರೊಬ್ಬರ ಮೇಲೆ ಸಿಟ್ಟಾಗುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ವರದಿಗಾರ್ತಿ ಜೊತೆ ಅಣ್ಣಾಮಲೈ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ...
- Advertisement -
error: Content is protected !!