newsics.com
ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು (35) ಮಕ್ಕಳನ್ನು ಕೊಂದ ಪಾಪಿ ತಂದೆ. ಮೂಲತಃ ಗೋಕಾಕ ನಿವಾಸಿಯಾಗಿರುವ ಈತ ದಾವಣಗೆರೆ ನಗರದ ಆಂಜನೇಯ ಮಿಲ್ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು.
ಅಮರನ ಪತ್ನಿ ಲಕ್ಷ್ಮಿ ತನ್ನ ತವರು ಮನೆಗೆ ವಿಜಯಪುರಕ್ಕೆ ಹೋಗಿದ್ದಳು. ಪತ್ನಿ ತವರಿಗೆ ಹೋಗುವುದಕ್ಕೂ ಮುನ್ನ ಅಮರ ತನ್ನಿಬ್ಬರು ಮಕ್ಕಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೆರೆ ಟೋಲ್ ಗೇಟ್ ವರೆಗೂ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಇಬ್ಬರ ಮಕ್ಕಳ ಬಾಯಿಗೆ ಟಿಕ್ಸೋ ಟೇಪ್ ಹಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿ ಮಕ್ಕಳ ಶವವನ್ನು ಕಾರಿನಲ್ಲಿಯೇ ತಂದಿದ್ದ. ಇತ್ತ ಮಕ್ಕಳ ಸಾವಿನ ಬಗ್ಗೆ ಸಂಶಯ ಬಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತನಿಖೆ ವೇಳೆ ಕೊಲೆ ಮಾಡಿದ್ದಾಗಿ ಅಮರ ಒಪ್ಪಿಕೊಂಡಿದ್ದಾನೆ. ಮಕ್ಕಳ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.