ಕಾನ್ಪುರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿದ್ದ ದುಷ್ಕರ್ಮಿಗಳು ಜಾಮೀನಿನ ಮೇಲೆ ಹೊರಬಂದು ಬಾಲಕಿಯ ತಾಯಿಯನ್ನು ಹತ್ಯೆಗೈದಿದ್ದಾರೆ.
ಆಬಿದ್, ಮಿಂಟು, ಮಹಬೂಬ್, ಚಾಂದ್ ಬಾಬು, ಜಮೀಲ್ ಮತ್ತು ಫಿರೋಝ್ ಆರೋಪಿಗಳು. 2018ರಲ್ಲಿ ಇವರನ್ನು ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಗುರುವಾರ ಬಾಲಕಿಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿದ್ದರು. ಆದರೆ ಬಾಲಕಿಯ ಮನೆಯವರು ನಿರಾಕರಿಸಿದ್ದು, ದುಷ್ಕರ್ಮಿಗಳು ತಾಯಿಯನ್ನು ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯ ತಾಯಿ ಮತ್ತು ಮತ್ತೊಬ್ಬ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬಾಲಕಿಯ ತಾಯಿ ಅಸುನೀಗಿದ್ದಾರೆ.
ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟವರೇ ತಾಯಿಯ ಕೊಂದರು!
Follow Us