Tuesday, December 5, 2023

ಗೋರಖ್ ಪುರದಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ; ಇಂದು ಮೋದಿಯಿಂದ ಶಂಕುಸ್ಥಾಪನೆ

Follow Us

newsics.com

ನವದೆಹಲಿ: ಉತ್ತರ ಪ್ರದೇಶದ ಗೋರಖ್‌’ಪುರ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಪುನರಾಭಿವೃದ್ಧಿ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ.

ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ಪುನರ್ ಅಭಿವೃದ್ಧಿ ಪಡಿಸಲಾಗುವುದು. ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ನೂತನ ರೈಲು ನಿಲ್ದಾಣ ಹೊಂದಿರಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಹೊಸ ರೈಲು ನಿಲ್ದಾಣವು ಅತ್ಯಾಧುನಿಕ ಸೌಲಭ್ಯಗಳು ಮತ್ತು ಪ್ರಯಾಣಿಕ ಸೌಕರ್ಯಗಳನ್ನು ಒಳಗೊಂಡಿರಲಿದೆ. ಗೋರಖ್‌ ಪುರದ ಪರಂಪರೆ ಮತ್ತು ಹೆಗ್ಗುರುತುಗಳು ಹೊಸ ನಿಲ್ದಾಣದ ವಾಸ್ತುಶಿಲ್ಪದ ವಿನ್ಯಾಸದಲ್ಲಿ ಪ್ರತಿಫಲಿಸಲಿದೆ. ಕಾಮಗಾರಿಯು ಎರಡೂವರೆ ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.

ಜನ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ಹೊಸ ಗೋರಖ್‌ ಪುರ ರೈಲು ನಿಲ್ದಾಣವು ವಿಶಾಲವಾಗಿ ಇರಲಿದೆ.ಇದು 6,300 ಚದರ ಮೀಟರ್ ಅಳತೆಯ ಕಾನ್ಕೋರ್ಸ್ನಲ್ಲಿ ವಿಸ್ತರಿಸಿರಲಿದ್ದು, ಏಕಕಾಲದಲ್ಲಿ 3,500 ಜನರು ಪ್ರವೇಶಿಸಬಹುದಾಗಿದೆ. ಛಾವಣಿಯು 31,000 ಚದರ ಮೀಟರ್ ಇರಲಿದ್ದು, 44 ಲಿಫ್ಟ್‌ಗಳು ಮತ್ತು 21 ಎಸ್ಕಲೇಟರ್‌ ಗಳು ಇರಲಿವೆ ಎಂಬ ಮಾಹಿತಿ ದೊರೆತಿದೆ.

ಆಧುನಿಕ ಸೌಲಭ್ಯಗಳು, ಆಹಾರ ಮಳಿಗೆಗಳು, ಕಾಯುವ ಹಾಲ್, ಎಟಿಎಂ ಮತ್ತು ಮಕ್ಕಳ ಆಟದ ಪ್ರದೇಶವನ್ನು ನಿಲ್ದಾಣ ಹೊಂದಿರಲಿದೆ. ಹೋಟೆಲ್, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಆಸ್ಪತ್ರೆ ಸೌಲಭ್ಯಗಳೂ ಇರಲಿವೆ. ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸೌಲಭ್ಯಗಳ ಸಾಮರ್ಥ್ಯವನ್ನು ವಿಸ್ತರಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ನಿತ್ಯಾನಂದ ಸ್ವಾಮೀಜಿಯ ಇಬ್ಬರು ಅನುಯಾಯಿಗಳಿಗೆ ಜಾಮೀನು ರಹಿತ ವಾರಂಟ್ ಜಾರಿ

ಮತ್ತಷ್ಟು ಸುದ್ದಿಗಳು

vertical

Latest News

ವಿಜಯೇಂದ್ರ ಪತ್ನಿ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ

Newsics.com ಕಲಬುರಗಿ : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ನಿ ಸಹೋದರ ಡಾ ಪ್ರಭುಲಿಂಗ ಮಾನ್ಕರ್ ಅವರ ಮನೆ...

ಭಾರತದಲ್ಲಿ 75 ಲಕ್ಷಕ್ಕೂ ಅಧಿಕ ವಾಟ್ಸ್ ​ಆ್ಯಪ್ ಅಕೌಂಟ್ ಬ್ಯಾನ್

Newsics.com ನವದೆಹಲಿ : ಮೆಟಾದ ತ್ವರಿತ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸ್​ಆ್ಯಪ್ ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ವಾಟ್ಸ್​ ಆ್ಯಪ್ ಖಾತೆಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. 2021 ಬಳಕೆದಾರರ ಸುರಕ್ಷತ...

ತೆಲಂಗಾಣದ ನೂತನ ಸಿಎಂ ಇವರೇ : ನಾಳೆಯೇ ಪ್ರಮಾಣ ವಚನ..!!

Newsics.com ಹೈದರಾಬಾದ್ : ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇದೀಗ ಬಂದ ಮಾಹಿತಿ ಪ್ರಕಾರ, ರೇವಂತ್ ರೆಡ್ಡಿ ಅವರನ್ನೇ...
- Advertisement -
error: Content is protected !!