newsics.com
ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ, ಈತನಿಗೆ ಸ್ನೇಹಿತ ಶ್ರೇಯಸ್ ಎಂಬಾತ ಚಾಕು ಇರಿದ್ದಿದ್ದಾನೆ.
ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರು ಸ್ನೇಹಿತರಾಗಿದ್ದು, ಜನತಾನಗರದಲ್ಲಿ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಶ್ರೇಯಸ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅದೇ ಯುವತಿ ಜತೆ ಸ್ನೇಹಿತ ಹಾಗೂ ರೂಮೇಟ್ ಆಗಿರುವ ಶಿವಕುಮಾರ್ ಕಾಂಟಾಕ್ಟ್ ಮಾಡಿದ್ದಾನೆ. ಹೀಗೆ ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡುತ್ತಿದ್ದನು. ಅಲ್ಲದೇ ತನ್ನ ಸ್ನೇಹಿತನ ಪ್ರಿಯತಮೆ ಜತೆ ನಿರಂತರ ಸಂಪರ್ಕದಲ್ಲಿದ್ದನು.
ಈ ವಿಚಾರ ಶ್ರೇಯಸ್ಸಿಗೆ ಗೊತ್ತಾಗಿ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ಜತೆಗೆ ತನ್ನ ಪ್ರೇಯಸಿಗೆ ಮೆಸೇಜ್ ಮಾಡಬೇಡ ಎಂದು ಶ್ರೇಯಸ್ ಎಚ್ಚರಿಕೆ ನೀಡಿದ್ದನು. ಆದರೂ ಶಿವಕುಮಾರ್ ಆಗಾಗ ಯುವತಿಗೆ ಮೆಸೇಜ್ ಮಾಡುತ್ತಿದ್ದನು. ಈ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಶ್ರೇಯಸ್, ಶಿವಕುಮಾರ್ ಗೆ ಚಾಕುವಿನಿಂದ ಇರಿಡ್ಡಿದ್ದಾನೆ. ಕೂಡಲೇ ಶಿವಕುಮಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.