newsics.com
ನಟ ಆಮೀರ್ ಖಾನ್, ಕಿರಣ್ ರಾವ್ ಅವರಿಗೆ ಡಿವೋರ್ಸ್ ಕೊಟ್ಟ ಮೇಲೆ ಸಿಂಗಲ್ ಆಗಿ ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಬಾಲಿವುಡ್ ನಟಿಯ ಜತೆ ಆಮೀರ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸಿನಿಮಾ ವಿಮರ್ಶಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿ, ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಆಮೀರ್ ಖಾನ್, ಅವರು ಇದೀಗ ಸಿನಿಮಾಗಿಂತ ವೈಯಕ್ತಿಕ ವಿವಾರವಾಗಿಯೇ ಭಾರಿ ಸುದ್ದಿ ಆಗ್ತಿದ್ದಾರೆ. ಮಗಳ ವಯಸ್ಸಿನ ಹುಡುಗಿ ಫಾತಿಮಾ ಜತೆ ಆಮೀರ್ ಮದುವೆ ಆಗ್ತಿದ್ದಾರೆ ಅಂತಾ ಬಾಲಿವುಡ್ ಅಂಗಳಲ್ಲಿ ಗುಸು ಗುಸು ಶುರುವಾಗಿದೆ. ಈ ಸುದ್ದಿಗೆ ಸಿನಿಮಾ ಮಿಮರ್ಶಕನ ಟ್ವೀಟ್ ಕೂಡ ಸದ್ದು ಮಾಡ್ತಿದೆ.
ಆಮೀರ್, ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಅವರನ್ನು ಶೀಘ್ರದಲ್ಲೇ ಮದುವೆಯಾಲಿದ್ದಾರೆ. ಆಮೀರ್ ಖಾನ್ ತಮ್ಮ ‘ದಂಗಲ್’ ಸಿನಿಮಾ ಸಮಯದಿಂದಲೂ ಸನಾ ಜತೆ ಡೇಟಿಂಗ್‌ನಲ್ಲಿದ್ದಾರೆ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
ನಟಿ ಫಾತಿಮಾ ಆಮೀರ್ ನಟನೆಯ ‘ದಂಗಲ್’, ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಕಮಾಲ್ ಆರ್. ಖಾನ್ ಅವರ ವಿವಾದತ್ಮಕ ಟ್ವೀಟ್‌ಗೆ ಆಮೀರ್ ಖಾನ್ ಸ್ಪಷ್ಟನೆ ನೀಡುವವರೆಗೂ ಕಾದುನೋಡಬೇಕಿದೆ.
‘ಕೊರಗಜ್ಜ’ ಸಿನಿಮಾಗೆ ಬಾಲಿವುಡ್ ನಟ ಕಬೀರ್ ಬೇಡಿ: ಕನ್ನಡದಲ್ಲಿ ಡಬ್ಬಿಂಗ್