Saturday, June 10, 2023

2ನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ

Follow Us

newsics.com

ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ ಅವರು ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಜತೆ ದಾಂಪತ್ಯ ಜೀವನಕ್ಕೆ ನಟ ಕಾಲಿಟ್ಟಿದ್ದಾರೆ.

ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿದೆ.

ಉದ್ಯಮಿ ರೂಪಾಲಿ ಅವರನ್ನ ಇದೀಗ ನಟ ಆಶಿಶ್ 2ನೇ ಮದುವೆಯಾಗಿದ್ದಾರೆ. ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಟ ಆಶಿಶ್ ಮದುವೆಯಾಗಿದ್ದಾರೆ. ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆಂದು ಆಸೆ ಇತ್ತು ಅದೇ ರೀತಿ ಆಯಿತು. ಖುಷಿಯಿದೆ. ಸದ್ಯದಲ್ಲೇ ನಮ್ಮಿಬ್ಬರ ಭೇಟಿ ಬಗ್ಗೆ ಎಲ್ಲವನ್ನೂ ಹೇಳುವೆ ಎಂದು ಆಶಿಶ್ ಮಾತನಾಡಿದ್ದಾರೆ.

ನನ್ನ ಹೆಣ್ಣುಮಕ್ಕಳು ನಿತ್ಯಾನಂದನ ಜತೆ ಇದ್ದಾರೆ: ನಟ ಅಶೋಕ್ ಕುಮಾರ್

‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಫೋನ್​ ನಂಬರ್​ ಲೀಕ್!

ಮತ್ತಷ್ಟು ಸುದ್ದಿಗಳು

vertical

Latest News

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್

Newsics.com ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ...

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ...

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...
- Advertisement -
error: Content is protected !!