newsics.com
ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ ಪಾಳಿಯಲ್ಲಿದ್ದ ವೇಳೆ ತಮಾಷೆ ಮಾಡುತ್ತಾ ಸಹೋದ್ಯೋಗಿಗಳು ಆತನನ್ನು ಹಿಡಿದು ಗುದದ್ವಾರಕ್ಕೆ ಪೈಪ್ ಅಳವಡಿಸಿ ದೇಹಕ್ಕೆ ಗಾಳಿ ಪಂಪ್ ಮಾಡಿದ್ದಾರೆ.
ರೆಹಮತ್ ಅಲಿ ವಿರೋಧಿಸಿದರೂ ಅವನ ಸಹೋದ್ಯೋಗಿಗಳು ಪಂಪ್ ಮಾಡುವುದನ್ನು ನಿಲ್ಲಿಸಲಿಲ್ಲ. ರೆಹಮತ್ ಅಲಿ ಅನಾರೋಗ್ಯಕ್ಕೀಡಾಗುತ್ತಿದ್ದಂತೆಯೇ ಹೆದರಿದ ಸಹೋದ್ಯೋಗಿಗಳು ಅವರನ್ನು ಹತ್ತಿರದ ಹೂಗ್ಲಿಯ ಚುಂಚೂರ ಇಮಾಂಬರಾ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಅಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಗ್ಲೆಂಡ್’ನ ಕೆಫೆ ರೇಸರ್ ಬೈಕ್’ನ ಇ-ಆವೃತ್ತಿ ತಯಾರಿಸಿದ ಭೂಪಾಲ್ ಸಹೋದರರು