ಸಿಡ್ನಿ: ಕಾಡ್ಗಿಚ್ಚಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ಆರ್ಥಿಕವಾಗಿಯೂ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರು ಬಾರದಿರುವುದರಿಂದ ಬಿಲಿಯನ್ ಗಟ್ಟಲೆ ಡಾಲರ್ ನಷ್ಟವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಂದಾಜು ಮಾಡಿದೆ.
ಪ್ರವಾಸಿಗರ ಭೇಟಿಯಲ್ಲಿ ಶೇಕಡಾ 20 ರಷ್ಟು ಕಡಿಮೆಯಾಗಿದ್ದು, 4.5 ಬಿಲಿಯನ್ ಆಸ್ಟ್ರೇಲಿಯಾ ಡಾಲರ್ (21300 ಕೋಟಿ ರೂ.) ಖೋತಾ ಆಗಿದೆ ಎಂದು ಆಸ್ಟ್ರೇಲಿಯನ್ ಟೂರಿಸಮ್ ಎಕ್ಸ್‌ಪೋರ್ಟ್ ಕೌನ್ಸಿಲ್ (ಎಟಿಇಸಿ) ಹೇಳಿದೆ.
ಈ ಹೊಡೆತದಿಂದ ಚೇತರಿಸಿಕೊಳ್ಳಲು ನಮಗೆ ಎಷ್ಟು ಸಮಯ ಬೇಕೋ ಗೊತ್ತಿಲ್ಲ ಎಂದು ಎಟಿಇಸಿ ಆಡಳಿತ ನಿರ್ದೇಶಕ ಪೀಟರ್ ಶೆಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಕಾಡ್ಗಿಚ್ಚು: ಭಾರೀ ವರಮಾನ ಖೋತಾ
Follow Us