♦ ಇಲ್ಲೀಗ ಚೀನಾ ರಾಖಿಗಳು ಸಿಗಲ್ಲ
ಲಡಾಖ್: ಇಲ್ಲಿನ ಗಾಲ್ವಾನ್ ಕಣಿವೆಯಲ್ಲಿ ಕಾಲ್ಕೆರೆದು ಜಗಳ ನಡೆಸಿ ಸೈನಿಕರ ಸಾವಿಗೆ ಕಾರಣವಾದ ಚೀನಾಕ್ಕೆ ಇದೀಗ ಭಾರತದ ಸೈನಿಕರ ಜತೆ ವ್ಯಾಪಾರಿಗಳು ಸೆಡ್ಡು ಹೊಡೆದಿದ್ದಾರೆ.
ಲೂಧಿಯಾನದ ಅಂಗಡಿಕಾರರು ಇನ್ನು ಮೇಲೆ ಚೀನಾದ ರಾಖಿ ಸೇರಿದಂತೆ ಎಲ್ಲ ಚೀನಾ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದು, ಈ ಸಂಗತಿ ಇದೀಗ ದೇಶದಾದ್ಯಂತ ಸುದ್ದಿಯಾಗಿದೆ.
ದೇಶದಲ್ಲಿ ಅಗಸ್ಟ್ 3 ರಂದು ರಕ್ಷಾಬಂಧನ ಆಚರಿಸಲಾಗುತ್ತಿದೆ. ಪ್ರತಿವರ್ಷ ಲೂದಿಯಾನಾ ಸೇರಿದಂತೆ ದೇಶದ ಎಲ್ಲ ಮಾರುಕಟ್ಟೆಗಳಲ್ಲೂ ಚೀನಾ ರಾಖಿಯನ್ನು ಮಾರಲಾಗುತ್ತಿತ್ತು. ಆದರೆ ಈ ವರ್ಷ ಚೀನಾ ಗಾಲ್ವಾನ್ ಕಣಿವೆಯಲ್ಲಿ ಭಾರತದ 20 ಕ್ಕೂ ಹೆಚ್ಚು ಸೈನಿಕರ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಚೀನಾದ ಯಾವುದೇ ಉತ್ಪನ್ನವನ್ನು ಮಾರಲು ಬಯಸುವುದಿಲ್ಲ ಎಂದು ಲೂಧಿಯಾನದ ವ್ಯಾಪಾರಿಗಳು ಸ್ಪಷ್ಟಪಡಿಸಿದ್ದಾರೆ.
ಚೀನಾ ಗಡಿಯಲ್ಲಿ ಮುಂದುವರಿದ ಉದ್ವಿಗ್ನ ಸ್ಥಿತಿ
ಭಾರತೀಯ ರಾಖಿಗಳನ್ನು ಮಾರಾಟ ಮಾಡುತ್ತಿದ್ದರೂ ಗ್ರಾಹಕರು ಇದು ಚೀನಾ ಮೇಡ್ ರಾಖಿಯೇ ಎಂದು ಕೇಳಿಯೇ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲ ಅಂಗಡಿಕಾರರು ಪ್ರತಿಕ್ರಿಯಿಸಿದ್ದಾರೆ.
ಜನರಲ್ಲೂ ದೇಶದ ಬಗ್ಗೆ ಅಪಾರ ಪ್ರೀತಿ, ಭಕ್ತಿ ಜಾಗೃತ ವಾಗಿದ್ದು ನಮ್ಮ ಸೈನಿಕರಿಗೆ ತೊಂದರೆ ಕೊಟ್ಟ ಚೀನಾದ ವಸ್ತುಗಳನ್ನು ನಾವು ಖರೀದಿಸಲು ಬಯಸುವುದಿಲ್ಲ ಎಂದು ಜನರು ಹೇಳ್ತಿರೋದು ಚೀನಾ ಉತ್ಪನ್ನಗಳ ಮಾರುಕಟ್ಟೆ ಕುಸಿತಕ್ಕೂ ಕಾರಣವಾಗಿದೆ.