Saturday, June 10, 2023

‘ಕೊರಗಜ್ಜ’ ಸಿನಿಮಾಗೆ ಬಾಲಿವುಡ್ ನಟ ಕಬೀರ್ ಬೇಡಿ: ಕನ್ನಡದಲ್ಲಿ ಡಬ್ಬಿಂಗ್

Follow Us

newsics.com

‘ಕಾಂತಾರ’ ಸಿನಿಮಾದ ಸಕ್ಸಸ್ ನಂತರ ಮತ್ತೆ ದೈವದ ಕಥೆಯೊಂದು ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡದ ಸಿನಿಮಾಗಳು ವಿಶ್ವದೆಲ್ಲೆಡೆ ಸದ್ದು ಮಾಡ್ತಿರೋದನ್ನ ನೋಡಿ, ಪರಭಾಷಿಕರು ಕನ್ನಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಕಬೀರ್ ಬೇಡಿ ಒಂದು ಹೆಜ್ಜೆ ಹೋಗಿ, ಕನ್ನಡದ ‘ಕೊರಗಜ್ಜ’ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ.

ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದಲ್ಲಿ ಬರುವ ಉದ್ಯಾವರ ಅರಸರ ಪಾತ್ರವನ್ನು ಕಬೀರ್ ಬೇಡಿ ನಟಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕರ ಕೆಲಸವನ್ನು ಅವರು ನಟ ಕಬೀರ್ ಮೆಚ್ಚಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ.

ಕಬೀರ್ ಬೇಡ ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡುತ್ತೇನೆ ಎಂದು ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕರಿಗೆ ಹೇಳಿದ್ದರು. ಆದರೆ ಅವರ ಮಾತನ್ನು ಒಪ್ಪುವುದು ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಅಷ್ಟು ಸುಲಭದಲ್ಲಿ ಸಾಧ್ಯವಿರಲಿಲ್ಲ. ಯಾವ, ಬಾಲಿವುಡ್, ಹಾಲಿವುಡ್, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಏಕಾಏಕಿ ದಕ್ಷಿಣ ಭಾರತದಲ್ಲಿ ಕನ್ನಡ, ತುಳು, ಸೊಗಡನ್ನು ಅರಿತು ಕೊರಗಜ್ಜ ಸಿನಿಮಾಗೆ ಡಬ್ಬಿಂಗ್ ಸಿನಿಮಾಗೆ ಸಾಥ್ ನೀಡಿದೆ. ಮುಂಬೈ ಸ್ಟುಡಿಯೋದಲ್ಲಿ 2-3 ಬಾರಿ ಸಂಭಾಷಣೆಯನ್ನು ಒಪ್ಪಿಸುತ್ತಾ ಡಬ್ಬಿಂಗ್ ನಡೆಸುತ್ತಿದ್ದಾರೆ.

ಸುಧೀರ್ ನಿರ್ದೇಶನದ ಸಿನಿಮಾ ನಟಿ ಭವ್ಯ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಲ್ಕೈದು ಕ್ಯಾಮೆರಾಗಳನ್ನ ಇಟ್ಟುಕೊಂಡು ಸಿನಿಮಾವನ್ನು ಶೂಟ್ ಮಾಡಿದ್ದಾರೆ. ಭಿನ್ನ ಕಥೆಯನ್ನ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದ್ದಾರೆ. ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ಸಿಗಲಿದೆ.

2ನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ

ಮತ್ತಷ್ಟು ಸುದ್ದಿಗಳು

vertical

Latest News

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ.

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
- Advertisement -
error: Content is protected !!