Friday, January 27, 2023

ಟ್ರೆಂಡಿಂಗ್‌ನಲ್ಲಿದೆ ‘ಕ್ಯಾಡ್‌ಬರಿ ಬಹಿಷ್ಕರಿಸಿ’: ಕಂಪನಿಯಿಂದ ಮೋದಿ ತಂದೆಗೆ ಅವಮಾನ?

Follow Us

newsics.com

ನವದೆಹಲಿ: ಬಾಯ್ಕಾಟ್ ಕ್ಯಾಡ್‌ಬರಿ ಇಂದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಕ್ಯಾಡ್‌ಬರಿ ಚಾಕಲೇಟ್‌ನಲ್ಲಿ ಹಲಾಲ್ ಪ್ರಮಾಣಿಕೃತ ‘ಗೋಮಾಂಸ’ವಿದೆ ಎಂಬ ನಕಲಿ ಚಿತ್ರ ಹರಿದಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣ, ಇದೇ ಪೋಸ್ಟ್ ಅನ್ನು ಒಂದು ಗುಂಪಿನವರು ಶೇರ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ.

2021ರಲ್ಲಿ ಕೂಡ ಕ್ಯಾಡ್‌ಬರಿಗೆ ಇದೇ ರೀತಿ ಸಂಕಷ್ಟ ಎದುರಾಗಿತ್ತು. ಆಗ ಕ್ಯಾಡ್‌ಬರಿ ಶೇ.100ರಷ್ಟು ಶಾಕಾಹಾರಿ ಉತ್ಪನ್ನ, ಕಂಪನಿ ಲೋಗೋದೊಂದಿಗೆ ಹರಿದಾಡುತ್ತಿರುವ ಗೋಮಾಂಸದ ಕೊಬ್ಬನ್ನು ಬಳಸಲಾಗುತ್ತದೆ ಎಂಬುದು ಸುಳ್ಳು ಸುದ್ದಿ ಎಂದು ಕಂಪನಿ ಸ್ಪಷ್ಟಪಡಿಸಿತ್ತು.

ಕ್ಯಾಡ್‌ಬರಿ ಆಸ್ಟ್ರೇಲಿಯಾದ ವೆಬ್‌ನಲ್ಲಿ ನೀಡಿರುವ ವಿವರಣೆಯನ್ನು ಬಳಸಿಕೊಂಡು ಭಾರತದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ. ಆದರೆ ಹಸಿರು ಚುಕ್ಕಿಯೊಂದಿಗೆ ಕಾಣಿಸಿಕೊಳ್ಳುವ ಕ್ಯಾಡ್‌ಬರಿ ಭಾರತದ ಉತ್ಪನ್ನ ಶೇ.100ರಷ್ಟು ಶಾಕಾಹಾರಿ ಎಂದು ಕಂಪನಿ ಸ್ಪಷ್ಟಿಕರಣ ನೀಡಿತ್ತು.

ಕ್ಯಾಡ್‌ಬರಿ ದೀಪಾವಳಿಗೆ ತನ್ನ ಉತ್ಪನ್ನ ಉತ್ತೇಜಿಸುವ ಟಿವಿ ಜಾಹೀರಾತು ಬಿಡುಗಡೆಗೊಳಿಸಿತ್ತು. ಅದರಲ್ಲಿ ದಾಮೋದರ ಎಂಬ ದೀಪದ ವ್ಯಾಪಾರಿಯನ್ನು ತೋರಿಸಲಾಗಿತ್ತು. ಆ ವಿಡಿಯೊವನ್ನು ಶೇರ್ ಮಾಡಿರುವ ವಿಶ್ವ ಹಿಂದು ಪರಿಷತ್‌ನ ಸಾದ್ವಿ ಪ್ರಾಚಿ, ಜಾಹೀರಾತಿನಲ್ಲಿ ತೋರಿಸಿರುವ ಬಡ, ದೀಪದ ಮಾರಾಟಗಾರನ ಹೆಸರನ್ನು ‘ದಾಮೋದರ್’ ಎಂಬುದಾಗಿ ಬಳಸಿರುವುದಕ್ಕೆ ಆಕ್ಷೇಪಿಸಿದ್ದಾರೆ.’ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಹೊಂದಿರುವ ಯಾರನ್ನಾದರೂ ಬಡವನೆಂದು ತೋರಿಸಲು ಈ ಜಾಹೀರಾತು ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಚಾಯ್‌ವಾಲೆ ಕೆ ಬಾಪ್ ದಿಯೇವಾಲಾ’ ಎಂದು ಸಾದ್ವಿ ಪ್ರಾಚಿ ಟ್ವಿಟ್ ಮಾಡಿದ್ದು, ಭಾರತದಲ್ಲಿ ಕ್ಯಾಡ್‌ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅನೇಕರು ಟ್ವಿಟ್ ಮಾಡಲು ಪ್ರಾರಂಭಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ

newsics.com ದೆಹಲಿ: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ ವಿಧಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ...

ನಟಿ ಅದಿತಿಯ ಮಾಜಿ ಪತಿ‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಿಸೈನರ್

newsics.com ಮುಂಬೈ: ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ, ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಟ ಸತ್ಯದೀಪ್ ಮಿಶ್ರಾ ಜೊತೆ ಮಸಾಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಕುರಿತು ನವಜೋಡಿ...

ಖಗೋಳದ ಅಪರೂಪದ ಅತಿಥಿ ಧೂಮಕೇತು ವಿದಾಯಕ್ಕೆ ಸಿದ್ಧ!

newsics.com ನವದೆಹಲಿ: ಖಗೋಳದ ಅಪರೂಪದ ಅತಿಥಿಯೊಂದು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಖಗೋಳದ ಅಪರೂಪದ ಅತಿಥಿ ಹಸಿರು ಬಣ್ಣದ ಸಿ/2022 ಇ3 ದೀರ್ಘಾವಧಿಯ ಧೂಮಕೇತು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಮತ್ತೆ ಇದರ ಭೇಟಿ ಬರೋಬ್ಬರಿ 50,000...
- Advertisement -
error: Content is protected !!