ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದ ಕಮಿಟಿಯ ಸದಸ್ಯನೇ ಹೋರಿ ತಿವಿತಕ್ಕೆ ಬಲಿಯಾಗಿದ್ದಾನೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ಸಂಕ್ರಾಂತಿ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದಿದ್ದರಿಂದ ಶಿವಪ್ಪ ಮಲ್ಲೂರ (34) ಅಸುನೀಗಿದ್ದಾನೆ.
ಹೋರಿ ತಿವಿದಿದ್ದರಿಂದ ತೀವ್ರವಾಗಿ ಗಾಯಗೊಂಡು ಹಿರೇಕೆರೂರು ಆಸ್ಪತ್ರೆಗೆ ಸಾಗಿಸುವ ವೇಳೆ ಶಿವಪ್ಪ ಅಸುನೀಗಿದ್ದಾನೆ ಎಂದು ಹಂಸಭಾವಿ ಪೊಲೀಸರು ತಿಳಿಸಿದ್ದಾರೆ.
ಸ್ಪರ್ಧೆ ಆಯೋಜಿಸಿದ್ದವನೇ ಹೋರಿ ತಿವಿತಕ್ಕೆ ಬಲಿ
Follow Us