newsics.com
ಸ್ವಚ್ಛತೆಯ ವಿಷಯಕ್ಕೆ ಬಂದರೆ ಸಿಂಗಾಪುರ ಅಗ್ರಸ್ಥಾನದಲ್ಲಿದೆ. ಸಿಂಗಾಪುರ ದೇಶದ ಸ್ವಚ್ಛತೆಯನ್ನು ಕಂಡರೆ ಜನರು ಬೆರಗಾಗುವುದು ನಿಶ್ಚಿತ. ಆದರೆ ಸಿಂಗಾಪುರದಲ್ಲಿ ಚೂಯಿಂಗ್ ಗಮ್ ತಿನ್ನುವಂತಿಲ್ಲ. ಇದೇನಪ್ಪಾ ವಿಚಿತ್ರ ಚೂಯಿಂಗ್ ಗಮ್ ತಿನ್ನಬಾರದೇ? ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ
ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಕಾನೂನುಬಾಹಿರ. ಚೂಯಿಂಗ್ ಗಮ್ ಖರೀದಿ ಮತ್ತು ಆಮದು ಎರಡಕ್ಕೂ ಇಲ್ಲಿ ನಿಷೇಧವಿದೆ.
ಸಿಂಗಾಪುರ 1992ರಲ್ಲಿ ಚೂಯಿಂಗ್ ಗಮ್ ಅನ್ನು ನಿಷೇಧಿಸಿದೆ. ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಿಂಗಾಪುರ ಈ ನಿರ್ಧಾರ ಕೈಗೊಂಡಿತ್ತು.
2004ರಲ್ಲಿ ಈ ಕಾನೂನಿನಲ್ಲಿ ವಿನಾಯಿತಿ ನೀಡಲಾಗಿದ್ದು, ವೈದ್ಯರು ಅಥವಾ ನೋಂದಾಯಿತ ಔಷಧಿಕಾರರಿಂದ ಖರೀದಿಸಿದ ಚಿಕಿತ್ಸಕ, ದಂತ ಮತ್ತು ನಿಕೋಟಿನ್ ಚೂಯಿಂಗ್ ಗಮ್ ಅನ್ನು ಕಾನೂನುಬಾಹಿರವೆಂದು ಇಲ್ಲಿ ಪರಿಗಣಿಸಲಾಗುವುದಿಲ್ಲ.
ಹೀಗಾಗಿ ಸಿಂಗಾಪುರಕ್ಕೆ ಪ್ರವಾಸ ಹೋಗುವ ಪ್ಲ್ಯಾನ್‍ನಲ್ಲಿ ನೀವಿದ್ದರೆ ಚೂಯಿಂಗ್ ಗಮ್ ಕೊಂಡೊಯ್ಯಬೇಡಿ. ಜತೆಗೆ ಇಲ್ಲಿನ ಕಟ್ಟುನಿಟ್ಟಿನ ಸ್ವಚ್ಛತಾ ನಿಯಮಗಳ ಬಗ್ಗೆಯೂ ತಿಳಿದುಕೊಳ್ಳಿ.