newsics.com
ರಾಯ್ಪುರ: ಕೈಯಿಂದ ಜಾರಿ ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಮ್‍ನ ಪೂರ್ತಿ ನೀರನ್ನು ಖಾಲಿ ಮಾಡಿದ ಪ್ರಸಂಗವೊಂದು ಛತ್ತೀಸ್‍ಗಢ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‍ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ ನಡೆದಿದೆ.
ಖೇರ್ಕಟ್ಟಾ ಅಣೆಕಟ್ಟಿನ ಸುತ್ತ ಭಾನುವಾರ ಸಂಜೆ ಆಹಾರ ಇಲಾಖೆಯ ಆಧಿಕಾರಿ ರಾಜೇಶ್ ವಿಶ್ವಾಸ್ ವಾಯುವಿಹಾರಕ್ಕೆ ತೆರಳಿದ್ದರು. ಹೀಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಮ್ಮ ಕೈ ಜಾರಿ ಮೊಬೈಲ್ ಡ್ಯಾಂನೊಳಗೆ ಬಿದ್ದಿದೆ. ಮೊಬೈಲ್ 1 ಲಕ್ಷ ರೂ. ದ್ದಾಗಿದೆ.
ಮೊಬೈಲ್‍ಗಾಗಿ ಇಡೀ ಅಣೆಕಟ್ಟಿನ ನೀರನ್ನೇ ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಹೀಗಾಗಿ ಸುಮಾರು ಮೂರು ದಿನಗಳ ಕಾಲ 8 ಸಾವಿರ ರೂ. ಮೌಲ್ಯದ ಡೀಸೆಲ್ ಬಳಸಿ 21 ಲಕ್ಷ ಲೀಟರ್ ನೀರನ್ನು ಹೊರತೆಗೆದು ಮೊಬೈಲ್ ಹುಡುಕಿ ಕೊಟ್ಟಿದ್ದಾರೆ.