Friday, September 30, 2022

ಬೆಂಗಳೂರಿನ ಕಾಲೇಜಿನಲ್ಲಿ ಮಾರಾಮಾರಿ, ವಿದ್ಯಾರ್ಥಿ ಬಲಿ

Follow Us

newsics.com

ಬೆಂಗಳೂರು: ಕಾಲೇಜಿನಲ್ಲಿ ನಡೆದ ಮಾರಾಮಾರಿಯಲ್ಲಿ 12ನೇ ತರಗತಿ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಅರ್ಬಾಜ್ (18) ಕೊಲೆಯಾದ ಯುವಕ.  ಗುರುವಾರ ಕಾಲೇಜ್ ಫೆಸ್ಟ್ ವೇಳೆ  ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳ ಜೊತೆ ಆರ್ಬಾಜ್ ಜಗಳ ಮಾಡಿಕೊಂಡಿದ್ದ. ಇಂದು ಮಧ್ಯಾಹ್ನ ನಮಾಜ್ ಮುಗಿಸಿ ಕಾಲೇಜಿಗೆ ಬಂದಿದ್ದ. ಬಳಿಕ ಕಾಲೇಜಿನಿಂದ ಹೊರ ಕರೆದು ಚಾಕುವಿನಿಂದ ಇರಿದಿದ್ದಾರೆ.

ಬಳಿಕ ಗಾಯಾಳು ಆರ್ಬಾಜ್‌ನನ್ನು ಕೆಜಿ ಹಳ್ಳಿಯ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಕಾಲೇಜ್‌ನಲ್ಲಿ ನಡೆದ ಗಲಾಟೆ ವಿಚಾರಕ್ಕೆ ಇಂದು ಇಂದು ಮಧ್ಯಾಹ್ನ 2.30 ಸುಮಾರಿಗೆ ಅರ್ಬಾಜ್ ಕೊಲೆ‌ಯಾಗಿರುವ ಶಂಕೆ ವ್ಯಕ್ತವಾಗಿದೆ. ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

‘ಮಂಕಿಪಾಕ್ಸ್’ ವೈರಸ್‌ಗೆ ಹೊಸ ಹೆಸರು ಘೋಷಿಸಿದ WHO

ಮತ್ತಷ್ಟು ಸುದ್ದಿಗಳು

vertical

Latest News

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ...

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

newsics.com ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು. ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ...

ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ್ರೆ ಬೀದಿ ನಾಯಿಯೂ ಕಚ್ಚಿತು!

newsics.com ಕೇರಳ: ಬೆಕ್ಕು ಕಚ್ಚಿದ್ದರಿಂದ ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದ ಮಹಿಳೆಯೊಬ್ಬರಿಗೆ ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೊಂದು ಕಚ್ಚಿದೆ. ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ವಿಜಿಂಜಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಬೆಳಗ್ಗೆ...
- Advertisement -
error: Content is protected !!