newsics.com
ಬೆಂಗಳೂರು: ಇಂದು ಕಾಂಗ್ರೆಸ್‌ನ 24 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಕೆಲ ಹಿರಿಯ ನಾಯಕರಿಗೆ ಸಚಿವ ಸ್ಥಾನ ತಪ್ಪಿದೆ.
ಹಲವು ಹಿರಿಯ ನಾಯಕರು ಮಂತ್ರಿಗಿರಿಗೆ ಲಾಬಿ ನಡೆಸಿದ್ದರು. ಆದರೆ ಹೈಕಮಾಂಡ್ ಯಾವುದೇ ಲಾಬಿಗೆ ಬಗ್ಗದೇ ಅದರ ಬದಲಿಗೆ ಮಂತ್ರಿ ಸ್ಥಾನಕ್ಕೆ ಶಾಸಕರನ್ನು ಆಯ್ಕೆ ಮಾಡಲಾಗಿದೆ.
ಬಂಜಾರ ಸಮಾಜದ ಏಕೈಕ ಶಾಸಕ ರುದ್ರಪ್ಪ ಲಮಾಣಿಗೂ ನಿರಾಸೆಯಾಗಿದೆ. ಎಂಎಲ್ಸಿ ಬಿ.ಕೆ ಹರಿಪ್ರಸಾದ್, ಬಸವರಾಜ ರಾಯರೆಡ್ಡಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಬಿಜೆಪಿಗೆ ರಾಜೀನಾಮೆ ನೀಡಿ ಸೋತಿದ್ದ ಶೆಟ್ಟರ್ ಅವರಿಗೆ ಪರಿಷತ್ ಸ್ಥಾನ ನೀಡಿ ಮಂತ್ರಿ ಎಂದು ನಿರೀಕ್ಷಿಸಲಾಗಿತ್ತು. ಅದೇ ರೀತಿಯಾಗಿ ಅಥಣಿಯಿಂದ ಗೆದ್ದಿದ್ದ ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಇಬ್ಬರಿಗೂ ಮಂತ್ರಿ ಸ್ಥಾನ ನೀಡಿಲ್ಲ.
ಮಂತ್ರಿ ಸ್ಥಾನ ಯಾರಿಗಿಲ್ಲ?
ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ರುದ್ರಪ್ಪ ಲಮಾಣಿ, ಬಿ.ಕೆ ಹರಿಪ್ರಸಾದ್, ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ತನ್ವೀರ್ ಸೇಠ್, ಶಾಮನೂರು ಶಿವಶಂಕರಪ್ಪ, ಆರ್.ವಿ ದೇಶಪಾಂಡೆ, ಹ್ಯಾರಿಸ್, ಶಿವಲಿಂಗೇಗೌಡ, ಅಜಯ್ ಸಿಂಗ್, ಟಿ.ಬಿ ಜಯಚಂದ್ರ, ಎಂ.ಕೃಷ್ಣಪ್ಪ, ವಿಜಯಾನಂದ ಕಾಶಪ್ಪನವರ್ ನರೇಂದ್ರಸ್ವಾಮಿ, ತುಕರಾಂ.