ನವದೆಹಲಿ: ಕೊರೋನಾ ವೈರಸ್ ಭಾರತಕ್ಕೆ ಹರಡದಂತೆ ಹಲವು ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಜನವರಿ 15 ಅಥವಾ ನಂತರ ಚೀನಾಕ್ಕೆ ಭೇಟಿ ನೀಡಿದ ವಿದೇಶಿಯರು ಭಾರತಕ್ಕೆ ಪ್ರವೇಶಿಸದಂತೆ ಕಠಿಣ ನಿರ್ಬಂಧ ವಿಧಿಸಲಾಗಿದೆ. ವಾಯು, ನೆಲ ಮತ್ತು ಜಲ ಮಾರ್ಗ ಸೇರಿದಂತೆ ಯಾವುದೇ ರೀತಿಯಲ್ಲಿ ಈ ವಿದೇಶಿಯರು ಭಾರತ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ನಾಗರಿಕ ವಿಮಾನಯಾನ ಇಲಾಖೆ ಮಹಾ ನಿರ್ದೇಶಕರು ಸ್ಪಷ್ಟಪ಼ಡಿಸಿದ್ದಾರೆ. ಕೊರೋನಾ ವೈರಸ್ ಹಾವಳಿ ಭಾರತದ ತೀವ್ರ ಆತಂಕಕ್ಕೆ ಕಾರಣವಾಗಿದೆ.