ನವದೆಹಲಿ: ಮಾರಕ ಕೊರೋನಾದ ಮಹಾಸ್ಫೋಟ ಸಂಭವಿಸಿದೆ. ಊಹಿಸಲು ಅಸಾಧ್ಯವಾಗುತ್ತಿರುವ ರೀತಿಯಲ್ಲಿ ರೋಗ ಹರಡುತ್ತಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 40, 425 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 11, 18, 403ಕ್ಕೆ ತಲುಪಿದೆ. ಇದು ಒಂದೇ ದಿನ ವರದಿಯಾದ ಅತ್ಯಧಿಕ ಕೊರೋನಾ ಪ್ರಕರಣವಾಗಿದೆ
ದೇಶದ ವಿವಿಧ ಆಸ್ಪತ್ರೆಗಳಲ್ಲಿ 3, 90, 459 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ರೋಗ ವ್ಯಾಪಕವಾಗಿ ಹರಡುತ್ತಿದ್ದರೂ ಸಾವಿನ ಪ್ರಮಾಣ ಇಳಿಮುಖವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.
ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಮಾರಕ ಕೊರೋನಾ 681 ಮಂದಿಯನ್ನು ಬಲಿ ಪಡೆದುಕೊಂಡಿದೆ. ಕೊರೋನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 27, 497ಕ್ಕೆ ತಲುಪಿದೆ.