Saturday, June 10, 2023

ಕರೆಂಟ್ ಬಿಲ್ ಗೋಲ್‌ಮಾಲ್: ಜೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ

Follow Us

newsics.com

ರಾಯಚೂರು: ಕಾಂಗ್ರೆಸ್ ಸರ್ಕಾರ ಘೋಷಿಸಿರುವ 200 ಯೂನಿಟ್‌ ಉಚಿತ ವಿದ್ಯುತ್ ಗ್ಯಾರಂಟಿ ಗೊಂದಲದ ನಡುವೆ ರಾಯಚೂರಿನ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಗೋಲ್‌ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಜೆಸ್ಕಾಂಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ.

ಗ್ರಾಮಿಣ ಭಾಗದಲ್ಲಿ ಗ್ರಾಮಸ್ಥರು, ಬಡ ರೈತರಿಂದ ವಸೂಲಿ ಮಾಡಿದ ವಿದ್ಯುತ್ ಬಿಲ್‌ಗೆ ರಶೀದಿ ಕೊಡದೇ ಸಂಗ್ರಹಿಸಿದ ಹಣವನ್ನ ಬ್ಯಾಂಕ್‌ಗೂ ಕಟ್ಟದೇ ಗ್ರಾಮ ವಿದ್ಯುತ್ ಬಿಲ್‌ ಕಲೆಕ್ಟರ್‌ಗಳೇ ಗುಳುಂ ಮಾಡಿರುವುದು ಬಯಲಾಗಿದೆ. ತಕ್ಷಣದ ಮಾಹಿತಿ ಪ್ರಕಾರ ರಾಯಚೂರು ತಾಲೂಕಿನ ಚಂದ್ರಬಂಡಾ ಜೆಸ್ಕಾಂ ಶಾಖೆ ಸೇರಿ ಸುಮಾರು 20 ಲಕ್ಷ ರೂಪಾಯಿ ವಂಚನೆಯಾಗಿರುವುದು ಕಂಡುಬಂದಿದೆ ಎಂದು ಜೆಸ್ಕಾಂ ಇಇ ಚಂದ್ರಶೇಖರ ದೇಸಾಯಿ ಹೇಳಿದ್ದಾರೆ.

ಆರ್.ಆರ್ ಸಂಖ್ಯೆಗಳ ವಸೂಲಾತಿ ಹಾಗೂ ಬ್ಯಾಂಕ್‌ಗೆ ಹಣ ಸಂದಾಯವಾದ ಕುರಿತು ಜೆಸ್ಕಾಂ ಅಧಿಕಾರಿಗಳು ಪರಿಶೀಲಿಸಿದಾಗ ನಕಲಿ ದಾಖಲೆಗಳ ಮೂಲಕ ಗೋಲ್‌ಮಾಲ್ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಚಂದ್ರಬಂಡಾ ಗ್ರಾಮದ ವಿದ್ಯುತ್ ಬಿಲ್‌ ಕಲೆಕ್ಟರ್‌ ಮಲ್ಲೇಶ್‌ಗೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನೋಟಿಸ್ ನೀಡಿದ್ದು ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ ಚಂದ್ರಬಂಡಾ ಮಾತ್ರವಲ್ಲದೇ ಹಲವೆಡೆ ಇದೇ ರೀತಿ ಗೋಲ್ ಮಾಲ್ ನಡೆದಿದ್ದು ಕೋಟ್ಯಾಂತರ ರೂಪಾಯಿ ವಂಚಿಸಿರುವ ಅನುಮಾನ ಮೂಡಿದೆ.

ಗ್ರಾಮೀಣ ಭಾಗದ ಬಹುತೇಕ ಬಡ ರೈತರು ಉಚಿತ ವಿದ್ಯುತ್ ಭರವಸೆ ಇಟ್ಟುಕೊಂಡು ಕುಳಿತಿರುವಾಗ ತಮ್ಮ ಹಣ ದುರ್ಬಳಕೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಬಿಲ್ ಕೊಡದೇ, ಹಣವನ್ನ ಬ್ಯಾಂಕ್‌ಗೂ ಕಟ್ಟದೇ ಇರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

KRS ಡ್ಯಾಂ ನೀರಿನ ಮಟ್ಟ ಕುಸಿತ: 5 ವರ್ಷಗಳ ಬಳಿಕ ಪುರಾತನ ದೇವಾಲಯ ಗೋಚರ

ಮತ್ತಷ್ಟು ಸುದ್ದಿಗಳು

vertical

Latest News

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಗ್ಯಾರಂಟಿ ಜಾರಿ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್

newsics.com ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಬೆನ್ನಲ್ಲೇ ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಕರೆಂಟ್ ಬಿಲ್ ದರ ಏರಿಕೆ ಬಳಿಕ...
- Advertisement -
error: Content is protected !!