newsics.com
ಶಿಮ್ಲಾ: ಜಗತ್ತಿನ ಅತಿ ಉದ್ದದ ಹೆದ್ದಾರಿ ಖ್ಯಾತಿಯ ಸುರಂಗ ಮಾರ್ಗ ‘ಅಟಲ್ ಟನಲ್’ನೊಳಗೆ ಡಾನ್ಸ್ ಮಾಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 10 ಪ್ರವಾಸಿಗರನ್ನು ಬಂಧಿಸಿರುವ ಹಿಮಾಚಲ ಪ್ರದೇಶ ಪೊಲೀಸರು, ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಗುರುವಾರವೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುರಂಗದೊಳಗೆ ವಾಹನ ನಿಲ್ಲಿಸಿ, ಹಾಡು ಹಾಕಿ ನೃತ್ಯ ಮಾಡಿದ್ದರು. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಪ್ರವಾಸಿಗರೆಲ್ಲರೂ ದೆಹಲಿಯವರಾಗಿದ್ದು, 20-30 ವಯಸ್ಸಿನವರಾಗಿದ್ದಾರೆ ಎಂದು ಕುಲು ಎಸ್.ಪಿ ಗೌರವ್ ಸಿಂಗ್ ಹೇಳಿದ್ದಾರೆ.
ಈ ಸುರಂಗ ಮಾರ್ಗ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದು, ಪ್ರವಾಸಿ ತಾಣವಾಗಿರುವ ಈ ಸುರಂಗ ಮಾರ್ಗ ನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಮಾರ್ಗ ಅಟಲ್ ಟನಲ್ 10,040 ಅಡಿ ಉದ್ಧವಿದೆ. ಇದು 13,058 ಅಡಿ ಎತ್ತರದ ರೋಹ್ಟಾಂಗ್ ಪಾಸ್ನ ಕೆಳಗಿರುವ 9.02 ಕಿ.ಮೀ ಅಂಡರ್ಪಾಸ್ ಲಾಹೌಲ್-ಸ್ಪಿಟಿ ಜಿಲ್ಲೆಯ ಲಾಹೌಲ್ ಮತ್ತು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮನಾಲಿಯನ್ನು ಸಂಪರ್ಕಿಸುತ್ತದೆ.
ಮಾರ್ಚ್-ಮೇನಲ್ಲೇ ಕರ್ನಾಟಕ ಸೇರಿ ದೇಶವನ್ನು ರೂಪಾಂತರಿ ಕೊರೋನಾ ಕಾಡಿತ್ತು…
ಬಂಡೀಪುರದಲ್ಲಿ ಭಾರೀ ಅಗ್ನಿ ಅವಘಡ; 100ಕ್ಕೂ ಹೆಚ್ಚು ಅರಣ್ಯ ನಾಶ
ನೀರಿನಲ್ಲಿ ಮುಳುಗಿ ಅಣ್ಣ-ತಂಗಿ ಸಾವು