Friday, May 20, 2022

ಸೋಲೊಪ್ಪಿದ ಕಿಂಗ್ಸ್ ಇಲೆವೆನ್, ಮುಂಬೈ ಇಂಡಿಯನ್ಸ್’ಗೆ ಜಯ

Follow Us

newsics.com
ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 48 ರನ್ ನಿಂದ ಸೋಲನುಭವಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ 192 ರನ್ ಸವಾಲನ್ನು ಬೆನ್ನತ್ತುವಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿಫಲವಾಯಿತು. ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭಿಕ ಆಟಗಾರರಾದ ನಾಯಕ ಲೋಕೇಶ್ ರಾಹುಲ್ ಮಯಾಂಕ್ ಅಗರ್ವಾಲ್ ಉತ್ತಮ ಮೊತ್ತ ಕೂಡಿಸುವ ಹಂತದಲ್ಲೇ ಅಗರ್ವಾಲ್ (25) ರನ್ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಲೋಕೇಶ್ ರಾಹುಲ್ (17), ನಾಯರ್(0), ನಿಕೋಲಸ್ ಪೂರನ್ (44), ಗ್ಲೆನ್ ಮ್ಯಾಕ್ಸ್ ವೆಲ್ (11) ರನ್ ಗೆ ವಿಕೆಟ್ ಒಪ್ಪಿಸಿ ಮುಂಬೈ ಇಂಡಿಯನ್ಸ್ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು. ಪ್ರಾರಂಭದಿಂದಲೇ ಪಂಜಾಬ್ ದಾಂಢಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದ ಮುಂಬೈ ಇಂಡಿಯನ್ಸ್ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಉರುಳಿಸಿದರು.

ಮತ್ತಷ್ಟು ಸುದ್ದಿಗಳು

Latest News

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...

ಮತ್ತೆ ಚಿನ್ನ, ಬೆಳ್ಳಿ ದುಬಾರಿ

newsics.com ಬೆಂಗಳೂರು: ಶುಕ್ರವಾರ (ಮೇ 20) ಚಿನ್ನ, ಬೆಳ್ಳಿ ಮತ್ತೆ ದುಬಾರಿಯಾಗಿದೆ. 10 ಗ್ರಾಂ ಚಿನ್ನಕ್ಕೆ 640 ರೂ. ಹೆಚ್ಚಳವಾಗಿದೆ. ಬೆಳ್ಳಿ 1 ಕೆಜಿಗೆ ಬರೋಬ್ಬರಿ 900 ರೂ. ಏರಿಕೆಯಾಗಿದೆ. ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ...
- Advertisement -
error: Content is protected !!