Newsics. Com
ಮಧ್ಯಪ್ರದೇಶ: ಕೆಲ ದುರುಳರು ನಮ್ಮನ್ನು ನೋಡಿ ನಾಯಿ ಬೊಗಳಿದೆ ಎಂದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೋರ್ನ ಬನ್ಗಂಗಾ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ.
ಕೆಲವು ದಿನಗಳಿಂದ ಶ್ವಾನ ಇವರನ್ನ ನೋಡಿ ಬೊಗಳಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಚಾಕು ತಂದು ಶ್ವಾನಕ್ಕೆ ಇರಿದು ಹತ್ಯೆ ಮಾಡಿದ್ದಾರೆ. ಇವರ ಹಲ್ಲೆಯಿಂದ ಶ್ವಾನ ಸ್ಥಳದಲ್ಲೇ ಸಾವನ್ನಪ್ಪಿದೆ. ಸೋಮವಾರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬನ್ಗಂಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.