newsics.com
ಇದು ಸ್ಮಾರ್ಟ್ ಫೋನ್ ಯುಗ. ಆದರೆ ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಆತ್ಮಹತ್ಯೆಗೆ ದಾರಿಯಾಗಿದೆ ಎಂದು ಇತ್ತೀಚಿನ ಸೈಪಿಯನ್ ಲ್ಯಾಬ್ ಅಧ್ಯಯನದಲ್ಲಿ ತಿಳಿದುಬಂದಿದೆ .
ಈ ಅಧ್ಯಯನದ ಪ್ರಕಾರ 18 ರಿಂದ 24 ವರ್ಷದೊಳಗಿನ ಯುವಕರ ಮಾನಸಿಕ ಆರೋಗ್ಯ ಹಾಳಾಗುತ್ತಿರುವುದಕ್ಕೆ ಪ್ರಮುಖ ಕಾರಣ ಸ್ಮಾರ್ಟ್ ಫೋನ್ ಬಳಕೆ ಎನ್ನಲಾಗಿದೆ.
ಸ್ಮಾರ್ಟ್ ಫೋನ್ ನ ಅತಿಯಾದ ಬಳಕೆಯಿಂದ ಮನಸ್ಸಿನಲ್ಲಿ ಆತ್ಮಹತ್ಯೆಯ ಯೋಚನೆಗಳು ಹೆಚ್ಚಾಗಿ ಬರುತ್ತವೆ. ಸಮಾಜದೊಂದಿಗೆ ಹೆಚ್ಚಾಗಿ ಸಂಪರ್ಕವನ್ನು ಹೊಂದಲು ಸಾಧ್ಯವಾಗದ ಕಾರಣ ಮತ್ತು ತಮ್ಮ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ಕಾರಣ ಅವರ ಮನಸ್ಸಿನಲ್ಲಿ ಆತ್ಮಹತ್ಯೆಯಂತಹ ಯೋಚನೆಗಳು ಬರುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.