ಸಾನ್‌ಫ್ರಾನ್ಸಿಸ್ಕೊ: ವಾಟ್ಸ್ಯಾಪ್ ನಲ್ಲಿ ಜಾಹೀರಾತು ಮಾರಾಟ ಮಾಡದಿರಲು ವಾಟ್ಸ್ಯಾಪ್ ಮಾತೃ ಸಂಸ್ಥೆ ಫೇಸ್‌ಬುಕ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ವಾಟ್ಸ್ಯಾಪ್ ಸೇವೆಯಲ್ಲಿ ಜಾಹೀರಾತುಗಳನ್ನು ಹೊಂದಿಸುವ ಉತ್ತಮ ವಿಧಾನಗಳನ್ನು ಪರಿಶೀಲಿಸುವುದಕ್ಕಾಗಿ ರಚಿಸಲಾಗಿದ್ದ ತಂಡವೊಂದನ್ನು ಕೆಲ ತಿಂಗಳ ಹಿಂದೆಯೇ ಬರ್ಕಾಸ್ತು ಮಾಡಲಾಗಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಪ್ರಕಟಿಸಿದೆ.
ವಾಟ್ಸ್ಯಾಪ್ ನಿಂದ ಹಣ ಮಾಡಲು ಹಾಗೂ ಅದರ ಎನ್‌ಕ್ರಿಪ್ಶನ್ ತಂತ್ರಜ್ಞಾನವನ್ನು ದುರ್ಬಲಗೊಳಿಸಲು ಫೇಸ್‌ಬುಕ್ ಮಾಲೀಕ ಮಾರ್ಕ್ ಝುಕರ್‌ಬರ್ಗ್ ತರಾತುರಿಯಲ್ಲಿದ್ದಾರೆ ಎಂದು ‘ಫೋರ್ಬ್ಸ್’ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ವಾಟ್ಸ್ಯಾಪ್ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಆಯಕ್ಟನ್ ಹೇಳಿದ್ದಾರೆ.
ವಾಟ್ಸ್ಯಾಪ್ ನಲ್ಲಿ ಜಾಹೀರಾತಿಗೆ ಅವಕಾಶ ನೀಡದಿರಲು ಫೇಸ್‌ಬುಕ್ ಚಿಂತನೆ
Follow Us