ತಿರುವನಂತಪುರ: ಕರೋನಾ ವೈರಸ್ ಕೇರಳಕ್ಕೂ ಕಾಲಿಟ್ಟಿದ್ದು, ಈ ಮಧ್ಯೆ ವೈರಸ್ ಹಾವಳಿ ಕುರಿತ ಸುಳ್ಳು ಸುದ್ದಿ ಕೂಡ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸಿದ ಮೂವರನ್ನು ಬಂಧಿಸಿದೆ. ಯಾವುದೇ ಕಾರಣಕ್ಕೂ ರೋಗ ಪೀಡಿತರ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಆದರೂ ಕೆಲವು ವ್ಯಕ್ತಿಗಳು ಇದನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ