ನವದೆಹಲಿ: ದಾಸ್ತಾನು ಕೊರತೆ ಎದುರಾಗುವ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳ ಅವಧಿಗೆ 4 ಲಕ್ಷ ಟನ್ ಉದ್ದಿನ ಬೇಳೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಶೇ. 50ರಷ್ಟು ಉತ್ಪನ್ನ ಕಡಿಮೆಯಾಗಿದ್ದು, ಹೆಚ್ಚಿನ ಉದ್ದಿನ ಬೇಳೆಯನ್ನು ಆಮದು ಮಾಡಿಕೊಳ್ಳುವಂತೆ ಭಾರತೀಯ ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳ ಸಂಘ(ಐಪಿಜಿಎ) ಕೇಂದ್ರ ಸರ್ಕಾರವನ್ನು ಮನವಿ ಮಾಡಿದೆ. ಪರಿಣಾಮವಾಗಿ ವಾಣಿಜ್ಯ ಸಚಿವಾಲಯ ಈ ಆರ್ಥಿಕ ವರ್ಷದ ಅಂತ್ಯದವರೆಗೆ ಆಮದು ಪ್ರಮಾಣವನ್ನು 1.5 ಲಕ್ಷ ಟನ್ ನಿಂದ 4 ಲಕ್ಷ ಟನ್ ವರೆಗೆ ಹೆಚ್ಚಿಸಿದೆ.