newsics.com
ಸವದತ್ತಿ : ಯಲ್ಲಮ್ಮನ ಗುಡ್ಡದಲ್ಲಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯಕ್ರಮ ನಡೆಯಿತು. ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆದಿದ್ದು ಬರೋಬ್ಬರಿ 1.18 ಕೋಟಿ ಹಣ ಸಂಗ್ರಹಣೆಯಾಗಿದೆ.
ಈ ದೇವಸ್ಥಾನಕ್ಕೆ ದೇಶದ ಹಲವು ಭಾಗಗಳಿಂದ ಭಕ್ತರು ಬರುತ್ತಾರೆ, ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ ,ಹಣ ಸಮರ್ಪಿಸುತ್ತಾರೆ. ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಹಣ ಸಂಗ್ರಹಣೆ ಆಗಿರುವುದು ವಿಶೇಷವಾಗಿದೆ.