newsics.com
ಹೈದರಾಬಾದ್: ತನ್ನ ಪತ್ನಿ ಲೈಂಗಿಕತೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಶವಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ಬಹಿರಂಗವಾಗುವ ಮೂಲಕ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೇ 20ರ ರಾತ್ರಿ ಅಪರಾಧ ನಡೆದಿದ್ದರೂ, ಪೊಲೀಸರು 10 ದಿನಗಳ ನಂತರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಟಾವತ್ ತರುಣ್ (24) ಎಂಬಾತ ತನ್ನ ಪತ್ನಿ ಝಾನ್ಸಿ (20) ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ತೆಲಂಗಾಣದ ನಗರ್‌ಕರ್ನೂಲ್ ಜಿಲ್ಲೆಯವರಾದ ಇವರಿಬ್ಬರು 2021ರಲ್ಲಿ ಪ್ರೇಮ ವಿವಾಹವಾಗಿದ್ದರು. ಆಟೋ ರಿಕ್ಷಾ ಚಾಲಕನಾಗಿದ್ದ ತರುಣ್ ತನ್ನ ಪತ್ನಿಯೊಂದಿಗೆ ಹೈದರಾಬಾದ್‌ಗೆ ವಲಸೆ ಬಂದಿದ್ದು, ಕುಟುಂಬವು ಐಎಸ್ ಸದನ್ ವಿಭಾಗದ ಖಾಜಾ ಬಾಗ್‌ನಲ್ಲಿ ನೆಲೆಸಿತ್ತು. ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಏಪ್ರಿಲ್ 16ರಂದು ಝಾನ್ಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.