ಮುಂಬೈ: ಜನಸಾಮಾನ್ಯರು ದಿನನಿತ್ಯ ಎಂಬಂತೆ ಬಳಸುವ ಆಂಟಿಬಯೋಟಿಕ್ ಮತ್ತಿತರರ ಅಗತ್ಯ ಔಷಧಿಗಳ ದರ ಶೀಘ್ರದಲ್ಲೇ ಶೇಕಡಾ 50ರಷ್ಟು ಹೆಚ್ಚಳವಾಗಲಿದೆ.
ಔಷಧ ದರಗಳ ನಿಯಂತ್ರಕ ಎನ್ ಪಿಪಿಎ ಗೆ ಇದೇ ಮೊದಲ ಬಾರಿಗೆ ಬದಲಾವಣೆ ತಂದಿರುವ ಸರ್ಕಾರ 21 ಸೂತ್ರೀಕರಣಗಳ ದರವನ್ನು ಪರಿಷ್ಕರಿಸಿದ್ದು, ಶೇ. 50ರಷ್ಟು ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದರಿಂದ ಬಿಸಿಜಿ ಚುಚ್ಚುಮದ್ದು, ವಿಟಮಿನ್ ಸಿ, ಕ್ಲೋರೋಕ್ವೈನ್, ಡ್ಯಾಪ್ಸೋನ್ ಮತ್ತಿತರರ ಅಗತ್ಯ ಔಷಧಗಳ ದರ ಏರಲಿದೆ. ಇದು ಏಕಕಾಲದ ಹೆಚ್ಚಳವಾಗಿರಲಿದ್ದು, ಇದನ್ನು ‘ಸಾರ್ವಜನಿಕ ಹಿತಾಸಕ್ತಿ’ಯಿಂದ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.