ತಿರುವನಂತಪುರ: ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ತಿರುವನಂತಪುರದಲ್ಲಿರುವ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಟಿಟ್ವರ್ ಖಾತೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಚಿತ್ರ ಲಗತ್ತಿಸಿದ್ದಾರೆ. ಯಾವಾಗಲೂ ಶಾಂತಿ ಮತ್ತು ವಿನೀತ ಭಾವನೆಯೊಂದಿಗೆ ಪದ್ಮನಾಭ ದೇವಸ್ಥಾನಕ್ಕೆ ಬಂದಿರುವುದಾಗಿ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ. ವಿಶ್ವದ ಅತೀ ಶ್ರೀಮಂತ ದೇವಸ್ಥಾನಗಳಲ್ಲಿ ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಸ್ಥಾನ ಕೂಡ ಒಂದು. ಇದರ ನೆಲಮಾಳಿಗೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಸಂಗ್ರವಹವಿದೆ. ಪದ್ಮನಾಭ ಕೇರಳವನ್ನು ಆಳಿದ ತಿರುವಾಂಕೂರು ರಾಜಮನೆತನದ ಆರಾಧ್ಯ ದೇವರಾಗಿದ್ದಾರೆ.