ಲಕ್ನೋ: ಅಯೋಧ್ಯೆಯಲ್ಲಿ ಚಿನ್ನದ ರಾಮ ಮಂದಿರ ನಿರ್ಮಾಣದ ಸಂಕಲ್ಪ ಮಾಡಲಾಗಿದೆ. ದ್ವಾರಕ ಪೀಠದ ಸ್ವಾಮಿ ಸ್ವರೂಪಾನಂದ ಶ್ರೀ ಈ ಬಯಕೆ ಹೊಂದಿದ್ದಾರೆ. ದ್ವಾರಕ ಪೀಠದ ಕಿರಿಯ ಶ್ರೀ ಅವಿಮುಕ್ತೇಶ್ವರಾನಂದ ಈ ವಿಷಯ ತಿಳಿಸಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಭವ್ಯ ರಾಮ ಮಂದಿರವನ್ನು ಚಿನ್ನದಲ್ಲಿ ನಿರ್ಮಾಣ ಮಾಡಬೇಕೆಂಬ ಬಯಕೆ ನಮ್ಮದಾಗಿದೆ. ಕೇಂದ್ರ ಸರ್ಕಾರ ಭೂಮಿ ಹಸ್ತಾಂತರಿಸಿದರೆ ಅದರಲ್ಲಿಯೇ ರಾಮ ಮಂದಿರ ಕಟ್ಟುತ್ತೇವೆ. ಇಲ್ಲವಾದರೆ ಅಯೋಧ್ಯೆಯಲ್ಲಿಯೇ ಇತರ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಸಿದ್ದವಿರುವುದಾಗಿ ಅವರು ತಿಳಿಸಿದ್ದಾರೆ. ಈ ಸಂಬಂಧ ಸಾಧು ಸಂತರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಕಿರಿಯ ಶ್ರೀ ಹೇಳಿದ್ದಾರೆ.
1008 ಅಡಿ ಎತ್ತರದ ಭವ್ಯ ರಾಮ ಮಂದಿರ ನಿರ್ಮಾಣದ ಕನಸು ನಮ್ಮದಾಗಿದೆ. ಇದು ವಿಶ್ವದಲ್ಲಿಯೇ ಅತೀ ಎತ್ತರದ ರಾಮಮಂದಿರ ವಾಗಲಿದೆ ಎಂದು ಕಿರಿಯ ಶ್ರೀ ಮಾಹಿತಿ ನೀಡಿದ್ದಾರೆ.