ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂ ಮಾಲಿಕತ್ವ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ನಾಲ್ಕು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿವೆ.
ವಿವಾದಿತ ಭೂಮಿಯನ್ನು ರಾಮಲಲ್ಲಾ ಸಂಘಟನೆಗೆ ನೀಡಿ ನ್ಯಾಯಾಲಯ ನ,9ರಂದು ನೀಡಿದ್ದ ಆದೇಶವನ್ನು ಅವರು ಪ್ರಶ್ನಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಾಲಯ ಇನ್ನೂ ವಿಚಾರಣೆಗೆ ಪರಿಗಣಿಸಿಲ್ಲ.
ಹಿಂದೂಗಳಿಗೆ ಸಂಪೂರ್ಣ ವಿವಾದಿತ ಭೂಮಿಯನ್ನು ನೀಡಿರುವ ತೀರ್ಪು ಸರಿಯಿಲ್ಲ. 1949ರ ಡಿಸೆಂಬರ್ ವರೆಗೆ ಮುಸ್ಲಿಮರು ಈ ಪ್ರದೇಶದಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂಬುದನ್ನು ನ್ಯಾಯಾಲಯ ಕೂಡ ಒಪ್ಪಿಕೊಂಡಿದೆ. ನಂತರ, ಹಿಂದೂಗಳು ಬಲವಂತವಾಗಿ ಆ ಜಾಗವನ್ನು ಆಕ್ರಮಿಸಿಕೊಂಡಿದ್ದರು. ಇದನ್ನು ನ್ಯಾಯಪೀಠ ಪರಿಗಣಿಸಿಲ್ಲ ಎಂದು ಮರುಪರಿಶೀಲನಾ ಅರ್ಜಿಯನ್ನು ಆಕ್ಷೇಪಿಸಲಾಗಿದೆ.