
ಅಮರಾವತಿ: ತಕ್ಷಣದಿಂದ ಜಾರಿಗೆ ಬರುವಂತೆ ಆಂಧ್ರದಲ್ಲಿನ ಎಲ್ಲಾ 3500 ಬಾರ್ ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಇದೇ ವೇಳೆ, ಹೊಸ ಬಾರ್ ನೀತಿಯನ್ನೂ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಪ್ರಕಟಿಸಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಈ ನೀತಿ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಹೊಸ ಬಾರ್ ನೀತಿಯಂತೆ ಮುಂದಿನ ದಿನಗಳಲ್ಲಿ 479 ಬಾರ್ ಗಳಿಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತದೆ. ಮುಂದಿನ ತಿಂಗಳು ಲಾಟರಿ ಮೂಲಕ ಬಾರ್ ಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಯೋಜಿಸಲಾಗಿದೆ. ಹೊಸ ಬಾರ್ ಲೈಸೆನ್ಸ್ ಗೆ 10 ಲಕ್ಷ ರೂ ನಿಗದಿ ಮಾಡಲಾಗಿದೆ. ಹಾಗೆಯೇ, ಥ್ರೀ-ಸ್ಟಾರ್ ಹೋಟೆಲ್ಗಳು ಮತ್ತು ಮೈಕ್ರೋ ಬೆವರೇಜ್ಗಳು ಮದ್ಯ ಮಾರಾಟಕ್ಕೆ ಪರವಾನಿಗೆ ಪಡೆಯಲು 1.5 ಕೋಟಿ ರೂ ತೆರಬೇಕಾಗುತ್ತದೆ.