ಅಮರಾವತಿ: ದೇಶಾದ್ಯಂತ ಈರುಳ್ಳಿ ಬೆಲೆ 100 ರೂ. ದಾಟಿರುವ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಮಾತ್ರ ಜನರಿಗೆ 25 ರೂ. ದರದಲ್ಲಿ ಒಂದು ಕೆಜಿ ಈರುಳ್ಳಿ ದೊರೆಯುತ್ತಿದೆ!
ಈ ಕುರಿತು ವಿಧಾನಸಭೆಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಸರ್ಕಾರ ಶೋಲಾಪುರ ಮತ್ತು ಅಲ್ವಾರದಂತಹ ಪ್ರದೇಶಗಳಿಗೆ ಈರುಳ್ಳಿಯನ್ನು ಖರೀದಿಸಿ ಅದನ್ನು ರಿತು ಬಜಾರ್ ಮಳಿಗೆಗಳಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸರ್ಕಾರ 36,500 ಕೆಜಿ ಈರುಳ್ಳಿ ಖರೀದಿಸಿದೆ ಎಂದು ಅವರು ತಿಳಿಸಿದ್ದಾರೆ.