ನವದೆಹಲಿ: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್)ನ ಹೊಸ ಡೈರೆಕ್ಟರ್ ಜನರಲ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಆನಂದ್ ಪ್ರಕಾಶ್ ಮಹೇಶ್ವರಿ ಅಧಿಕಾರ ಸ್ವೀಕರಿಸಿದ್ದಾರೆ.
ಮಹೇಶ್ವರಿ ಅವರು 1984ರ ಬ್ಯಾಚಿನ ಉತ್ತರ ಪ್ರದೇಶ ಕೆಡರ್ನ ಅಧಿಕಾರಿ. ಅವರನ್ನು ಸಿಆರ್ಪಿಎಫ್ನ ನೂತನ ಮುಖ್ಯಸ್ಥರನ್ನಾಗಿ ಸರ್ಕಾರ ಜನವರಿ 13ರಂದು ನೇಮಕ ಮಾಡಿತ್ತು. ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅವರು ನಿವೃತ್ತರಾಗಲಿದ್ದಾರೆ. ಜಗತ್ತಿನ ಅತಿ ದೊಡ್ಡ ಪಡೆಯೆನಿಸಿರುವ ಸಿಆರ್ಪಿಎಫ್ನಲ್ಲಿ 3.25 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆನಂದ್ ಮಹೇಶ್ವರಿ, ಸಿಆರ್ಪಿಎಫ್ ಹೊಸ ಡಿಜಿ
Follow Us