ನವದೆಹಲಿ: ಇನ್ನು ಮುಂದೆ ದೇಶದ ಜನರು ತಾವು ಹೊಂದಿರುವ ಎಲ್ಲಾ ಆಸ್ತಿಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕಾಗುತ್ತದೆ!
ಅಧಿಕಾರಕ್ಕೆ ಬಂದಂದಿನಿಂದ ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಇಂತಹದೊಂದು ವಿಧೇಯಕ ಜಾರಿಗೆ ತರಲು ಮುಂದಾಗಿದ್ದು, ಅದೀಗ ಅಂತಿಮ ಹಂತದಲ್ಲಿದೆ.
ಎಲ್ಲಾ ಆಸ್ತಿಗಳನ್ನು ಆಧಾರ್ನೊಂದಿಗೆ ಜೋಡಿಸುವುದರಿಂದ ರಿಯಲ್ ಎಸ್ಟೇಟ್ ಹಾಗೂ ಬೇನಾಮಿಯ ವಹಿವಾಟು ಸಂಪೂರ್ಣವಾಗಿ ಕಡಿಮೆಯಾಗಲಿದೆ ಎಂಬುದು ಸರ್ಕಾರದ ನಿಲುವಾಗಿದೆ. 2020ರ ವೇಳೆಗೆ ಈ ವಿಧೇಯಕ ಸಂಸತ್ತಿನ ಮುಂದೆ ಮಂಡನೆಯಾಗಲಿದೆ ಎಂಬ ಮಾಹಿತಿಯಿದೆ.