ನವದೆಹಲಿ: ಭಾರತೀಯ ರೈಲ್ವೆ ತನ್ನ ಎಲ್ಲ ಹೆಲ್ಪ್ ಲೈನ್ ನಂಬರ್ ಗಳನ್ನು ವಿಲೀನಗೊಳಿಸಿದೆ. ಇನ್ನು ಮುಂದೆ, 139 ಮಾತ್ರ ಏಕೈಕ ಹೆಲ್ಪ್ ಲೈನ್ ನಂಬರ್ ಆಗಿ ಕಾರ್ಯನಿರ್ವಹಿಸಲಿದೆ.
ಈ ಬಗ್ಗೆ ಭಾರತೀಯ ರೈಲ್ವೆ ಗುರುವಾರ ಮಾಹಿತಿ ನೀಡಿದ್ದು,
ತುರ್ತು ಸಮಸ್ಯೆ, ಗೊಂದಲ, ಟಿಕೆಟ್ ಸಂಬಂಧಿತ ವಿಷಯಗಳನ್ನು ಪರಿಹರಿಸಿಕೊಳ್ಳಲು ಇನ್ನು ಮುಂದೆ 139 ಮಾತ್ರ ಚಾಲ್ತಿಯಲ್ಲಿರಲಿದೆ. ಜತೆಗೆ 182 ನಂಬರ್ನ ಹೆಲ್ಪ್ ಲೈನ್ ಅಸ್ತಿತ್ವದಲ್ಲಿದ್ದರೂ ಅದು ರೈಲ್ವೆ ಸುರಕ್ಷೆಗೆ ಮಾತ್ರ ಬಳಕೆಯಾಗಲಿದೆ.
ಹೆಲ್ಪ್ಲೈನ್ 139 ನ್ನು 12 ಭಾಷೆಗಳಲ್ಲಿ ಬಳಸಬಹುದಾಗಿದೆ. ಇದು ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಂ (ಐವಿಆರ್ಎಸ್) ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ನಂಬರ್ ಗೆ ಯಾವುದೇ ಮೊಬೈಲ್ ಅಥವಾ ಸ್ಮಾರ್ಟ್ಫೋನ್ನಿಂದ ಕರೆಮಾಡಬಹುದು. ಕಾಲ್ ಸೆಂಟರ್ ಪ್ರತಿನಿಧಿಗಳ ಜತೆಗೆ ಮಾತನಾಡಬೇಕಾದರೆ * ಒತ್ತಬೇಕು.
ಸೆಕ್ಯುರಿಟಿ, ಮೆಡಿಕಲ್ ನೆರವಿಗಾಗಿ ಪ್ರಯಾಣಿಕರು ಒಂದನ್ನು ಒತ್ತಬೇಕು. ಪ್ಯಾಸೆಂಜರ್ ಎನ್ಕ್ವೈರಿಗೆ 2 ಒತ್ತಬೇಕು. ಕೆಟರಿಂಗ್ ಸಂಬಂಧಿತ ದೂರಿಗೆ 3, ಜನರಲ್ ಕಂಪ್ಲೇಂಟ್ಗಳಿಗಾಗಿ 4 ಒತ್ತಬೇಕು. ವಿಜಿಲೆನ್ಸ್ ಸಂಬಂಧಿತ ದೂರಿಗಾಗಿ 5 ಒತ್ತಬೇಕು. ಅಪಘಾತ ಸಂಬಂಧಿತ ವಿಚಾರಣೆಗೆ 6, ಕಂಪ್ಲೇಂಟ್ಗಳ ಸ್ಟೇಟಸ್ ತಿಳಿದುಕೊಳ್ಳಲು 9 ಒತ್ತಬೇಕು.
ಇನ್ನು 139 ಮಾತ್ರ ರೈಲ್ವೆ ಇಲಾಖೆ ಹೆಲ್ಪ್ ಲೈನ್ ನಂಬರ್
Follow Us