ಚಂಡೀಗಢ: ಇಬ್ಬರು ಮಹಿಳೆಯರನ್ನು ಕೊಲೆಗೈದಿರುವುದಾಗಿ ಹೇಳಿಕೊಂಡ ಕ್ಯಾಬ್ ಚಾಲಕನೊಬ್ಬನನ್ನು ಪೊಲೀಸರು ಖಾಸಗಿ ನ್ಯೂಸ್ ಚಾನಲ್ ಸ್ಟುಡಿಯೋದಲ್ಲೇ ಬಂಧಿಸಿದ್ದಾರೆ.
ಮಣಿಂದರ್ ಸಿಂಗ್ (31) ಬಂಧಿತ ಆರೋಪಿ.
ತಾನು 10 ವರ್ಷಗಳ ಅವಧಿಯಲ್ಲಿ ಇಬ್ಬರು ಮಹಿಳೆಯರನ್ನು ಕೊಲೆಗೈದಿರುವುದಾಗಿ ಟಿವಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದೇ ಆತನ ಬಂಧನಕ್ಕೆ ಕಾರಣ.
ನನ್ನ ಅತ್ತಿಗೆ ಸಹೋದರನ ಜತೆ ಅನೈತಿಕ ಸಂಬಂಧ ಹೊಂದಿದ್ದ 27 ವರ್ಷದ ನರ್ಸ್ ಸರಬ್ಜಿತ್ ಕೌರ್ ಎಂಬಾಕೆಯನ್ನು 2019ರ ಡಿ.31ರಂದು ಚಂಡೀಗಢದ ಹೋಟೆಲ್ ನಲ್ಲಿ, ಉತ್ತರ ಪ್ರದೇಶ ವ್ಯಕ್ತಿ ಜತೆ ಅಕ್ರಮ ಸಂಬಂಧ ಹೊಂದಿದ್ದ ರೇಣು ಎಂಬಾಕೆಯನ್ನು 2010ರಲ್ಲಿ ಕರ್ನಾಲ್ನಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದೆ ಎಂದು ಟಿವಿ ಕಾರ್ಯಕ್ರಮದಲ್ಲಿ ಹೇಳಿಕೊಂಡ ಮಣಿಂದರ್ ನನ್ನು ಪೊಲೀಸರು ಕೆಲವೇ ಸಮಯದಲ್ಲಿ ಬಂಧಿಸಿದ್ದಾರೆ.
ಇಬ್ಬರು ಮಹಿಳೆಯರ ಹತ್ಯೆ: ಟಿವಿ ಸ್ಟುಡಿಯೋದಲ್ಲೇ ಆರೋಪಿ ಸೆರೆ!
Follow Us